Iran: ಇರಾನ್ ನಲ್ಲಿ ಸುರಿಯಿತು ರಕ್ತದ ಮಳೆ – ಭಯಾನಕ ವಿಡಿಯೋ ವೈರಲ್

Iran: ಇತ್ತೀಚಿಗೆ ಜಗತ್ತಿನಲ್ಲಿ ಕೆಲವು ವಿಚಿತ್ರ ವಿದ್ಯಮಾನಗಳು ನಡೆಯುತ್ತಿವೆ. ಎಂದೂ ಕಾಣದ ಮೀನುಗಳು ಸಮುದ್ರಕ್ಕೆ ಬರುವುದು, ಆಮೆಯ ಹಿಂಡು ಸಮುದ್ರದಡದಲ್ಲಿ ಓಡಾಡುವುದು, ಸಮುದ್ರದ ಆಳದಲ್ಲಿ ಎಷ್ಟೋ ಕಿಲೋಮೀಟರ್ ದೂರದಲ್ಲಿ ಜೀವಿಸುವ ಮೀನು ದಡದಲ್ಲಿ ಬಂದು ಬೀಳುತ್ತಿರುವುದು ಹೀಗೆ ಒಂದಿಲ್ಲೊಂದು ವಿಚಿತ್ರ ಘಟನೆಗಳನ್ನು ನಾವು ಇತ್ತೀಚಿಗೆ ನೋಡುತ್ತಿದ್ದೇವೆ. ಇವೆಲ್ಲವೂ ಜಗತ್ತಿನ ಅಂತ್ಯ ಎಂದು ಅನೇಕರು ವಿಶ್ಲೇಷಿಸುತ್ತಿದ್ದಾರೆ. ಈ ಬೆನ್ನಲ್ಲೇ ಇರಾನ್ ನಲ್ಲಿ ಅಚ್ಚರಿಯ ಘಟನೆ ಎಂದು ನಡೆದಿದ್ದು ರಕ್ತದ ಮಳೆ ಸುರಿದಿದೆ. ಈ ಕುರಿತಾದ ಭಯಾನಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ಇರಾನಿ(Iran)ನಲ್ಲಿ ಭಾರೀ ಮಳೆಯ ಕಾರಣ ಅಲ್ಲಿನ ಕಡಲತೀರವು ಕೆಂಪು ಬಣ್ಣಕ್ಕೆ ತಿರುಗಿದ ವಿಡಿಯೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ಜನರು ಇದನ್ನು ‘ರಕ್ತದ ಮಳೆ’ ಎಂದು ಕರೆದಿದ್ದಾರೆ. ಕೆಲವು ಜನರಿಗೆ ಇದು ತಮಾಷೆಯಾಗಿ ಕಂಡರೆ, ಇತರರು ಇದನ್ನು ನೋಡಿ ಶಾಕ್‌ಗೆ ಒಳಗಾಗಿದ್ದಾರೆ. ಈ ವೈರಲ್ ವಿಡಿಯೊದಲ್ಲಿ ಭಾರೀ ಮಳೆಯಿಂದ ಕೆಂಪು ಮಣ್ಣು ಕಡಲ ತೀರಕ್ಕೆ ಹೋಗುವುದು ಸೆರೆಯಾಗಿದೆ. ಈ ಮಣ್ಣು ಸಮುದ್ರದ ನೀರಿನೊಂದಿಗೆ ಬೆರೆತಾಗ, ನೀರು ಸಹ ಕಡುಗೆಂಪು ಬಣ್ಣಕ್ಕೆ ತಿರುಗಿದೆ.

ಈ ವಿದ್ಯಮಾನಕ್ಕೆ ಮುಖ್ಯ ಕಾರಣ ಈ ಪ್ರದೇಶದಲ್ಲಿದ್ದ ಒಂದು ನಿರ್ದಿಷ್ಟ ರೀತಿಯ ಮಣ್ಣಂತೆ. ಅದು ಕೆಂಪು ಬಣ್ಣವಿದ್ದ ಕಾರಣ ನೀರು ಕೂಡ ಕೆಂಪು ಬಣ್ಣಕ್ಕೆ ತಿರುಗಿದೆ ಎಂದು ಮೂಲಗಳು ತಿಳಿಸಿ ವೆ. ಇರಾನಿನ ಟೂರಿಸಂ ಮಂಡಳಿ ಉಲ್ಲೇಖಿಸಿದ ಪ್ರಕಾರ, ಮಣ್ಣಿನಲ್ಲಿ ಕಬ್ಬಿಣದ ಆಕ್ಸೈಡ್‍ನ ಸಾಂದ್ರತೆಯ ಕಾರಣ ಹೀಗಾಗಿದೆ. ಮಣ್ಣಿನಲ್ಲಿರುವ ಖನಿಜಗಳು ಸಮುದ್ರದ ನೀರಿನೊಂದಿಗೆ ಬೆರೆತು, ಮೋಡಿ ಮಾಡುವ ಕೆಂಪು ಬಣ್ಣಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ.

Comments are closed.