Ameer Khan: 60ನೇ ವಯಸ್ಸಿಗೆ ಚಿಗುರಿದ ಪ್ರೇಮ – ಹೊಸ ಪ್ರೇಯಸಿಯ ಪರಿಚಯಿಸಿದ ಅಮೀರ್ ಖಾನ್!!

Ameer Khan: ಪ್ರೀತಿ ಪ್ರೇಮಕ್ಕೆ ಯಾವುದೇ ರೀತಿಯ ವಯಸ್ಸಿನ ಹಂಗಿಲ್ಲ. ಅದು ಯಾವಾಗ ಬೇಕಾದರೂ ಚಿಗುರೊಡೆಯಬಹುದು. ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ನಾವು ಸೋಶಿಯಲ್ ಮೀಡಿಯಾಗಳಲ್ಲಿ ನೋಡಿದ್ದೇವೆ. ಅನೇಕ ಸೆಲೆಬ್ರಿಟಿಗಳು ಈ ಮಾದರಿಯಲ್ಲಿ ನಡೆದಿದ್ದಾರೆ. ಅಂತೆಯೇ ಇದೀಗ ಖ್ಯಾತ ನಟ ಅಮೀರ್ ಖಾನ್(Ameer Khan) ಅವರಿಗೆ 60ನೇ ವಯಸ್ಸಿನಲ್ಲಿ ಪ್ರೇಮವಾಗಿದೆ. ಇದೀಗ ಅವರು ತಮ್ಮ ಹೊಸ ಗೆಳತಿಯನ್ನು ಜನಕ್ಕೆ ಪರಿಚಯಿಸಿದ್ದಾರೆ.

ಹೌದು, ಈಗಾಗಲೇ ಅವರು ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡಿರುವ ಅಮೀರ್ ಖಾನ್ ಗೆ ಈಗ ಮೂರನೇ ಬಾರಿಗೆ ಪ್ರೀತಿ ಚಿಗುರಿದೆ. 2ನೇ ಪತ್ನಿ ಕಿರಣ್ ರಾವ್​ಗೆ ಡಿವೋರ್ಸ್​ ನೀಡಿದ ಬಳಿಕ ಬೆಂಗಳೂರಿನ ಮಹಿಳೆಯ ಜೊತೆಗೆ ಆಮಿರ್ ಖಾನ್ ಅವರಿಗೆ ಲವ್ ಆಗಿದೆ. ಇದೇ ಮೊದಲ ಬಾರಿಗೆ ಅವರು ಈ ಬಗ್ಗೆ ಬಾಯಿ ಬಿಟ್ಟಿದ್ದಾರೆ.

ಮಾರ್ಚ್​ 13 ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆದಿದೆ. ಈ ವೇಳೆ ಅವರು ಪತ್ರಕರ್ತರ ಜೊತೆ ಮಾತನಾಡುವಾಗ ಪ್ರೇಯಸಿಯನ್ನು ಪರಿಚಯಿಸಿದ್ದಾರೆ. ಆಮಿರ್ ಖಾನ್ ಹೊಸ ಗರ್ಲ್​ಫ್ರೆಂಡ್​ (Aamir Khan Girlfriend) ಹೆಸರು ಗೌರಿ!. ಅಂದಹಾಗೆ ಆಮಿರ್ ಖಾನ್ ಮತ್ತು ಗೌರಿ ಅವರು ಹಲವು ತಿಂಗಳಿಂದ ರಿಲೇಷನ್​ಶಿಪ್​ನಲ್ಲಿ ಇದ್ದಾರೆ ಎಂದು ಗಾಸಿಪ್ ಹಬ್ಬಿತ್ತು. ಅದೀಗ ನಿಜವಾಗಿದೆ. ಗೌರಿ ಅವರಿಗೆ 6 ವರ್ಷದ ಮಗ ಕೂಡ ಇದ್ದಾನೆ. ಆಮಿರ್ ಖಾನ್ ಅವರ ಇಡೀ ಕುಟುಂಬದವರು ಗೌರಿಯನ್ನು ಭೇಟಿ ಆಗಿದ್ದಾರಂತೆ. ಗೌರಿ ಮತ್ತು ಆಮಿರ್ ಖಾನ್ ಜೊತೆಯಾಗಿ ಇರುವುದು ಅವರ ಕುಟುಂಬದವರಿಗೆ ಸಂತಸ ತಂದಿದೆ ಎಂದು ಹೇಳಿದ್ದಾರೆ.

ಅಂದಹಾಗೆ, ಆಮಿರ್​ ಖಾನ್ ಹಾಗೂ ಗೌರಿ ಅವರ ಪರಿಚಯ ಬರೋಬ್ಬರಿ 25 ವರ್ಷಗಳಷ್ಟು ಹಳೆಯದು. ಆದರೆ ಕೆಲವು ವರ್ಷಗಳು ಅವರಿಬ್ಬರು ಸಂಪರ್ಕದಲ್ಲಿ ಇರಲಿಲ್ಲ. ಕಿರಣ್ ರಾವ್​ಗೆ ಡಿವೋರ್ಸ್ ನೀಡಿದ ನಂತರ ಗೌರಿ ಜೊತೆ ಆಮಿರ್ ಖಾನ್ ಅವರ ಆಪ್ತತೆ ಹೆಚ್ಚಿದೆ ಎನ್ನಲಾಗಿದೆ.

ಅಮೀರ್ ಖಾನ್ ಹೇಳಿದ್ದೇನು?

ನಾನು ಮತ್ತು ಗೌರಿ 25 ವರ್ಷಗಳ ಹಿಂದೆ ಪರಿಚಯ ಆಗಿದ್ದೆವು. ಈಗ ನಾವು ಬಾಳ ಸಂಗಾತಿಗಳು. ಈ ಬಗ್ಗೆ ನಾವು ಗಂಭೀರವಾಗಿ ಯೋಚಿಸಿದ್ದೇವೆ. ಕಳೆದ ಒಂದೂವರೆ ವರ್ಷದಿಂದ ಒಟ್ಟಿಗೆ ವಾಸ ಮಾಡುತ್ತಿದ್ದೇವೆ. ‘ಲಗಾನ್’ ಸಿನಿಮಾದಲ್ಲಿ ಆಮಿರ್ ಖಾನ್ ಅವರು ಭುವನ್ ಎಂಬ ಪಾತ್ರ ಮಾಡಿದ್ದರು. ಕಥಾನಾಯಕಿಯ ಹೆಸರು ಗೌರಿ ಆಗಿತ್ತು. ಈಗ ಭುವನ್​ಗೆ ಗೌರಿ ಸಿಕ್ಕಿದ್ದಾಳೆ. ‘ಸಿನಿಮಾ ನಿರ್ಮಾಣದ ವಿಭಾಗದಲ್ಲಿ ಗೌರಿ ಕೆಲಸ ಮಾಡುತ್ತಾರೆ. ಅವರಿಗಾಗಿ ನಾನು ಪ್ರತಿ ದಿನ ಹಾಡು ಹೇಳುತ್ತೇನೆ. 60ನೇ ವಯಸ್ಸಿನಲ್ಲಿ ನನಗೆ ಮದುವೆ ಸರಿ ಎನಿಸುತ್ತೋ ಇಲ್ಲವೋ ಗೊತ್ತಿಲ್ಲ. ನನ್ನ ಮಕ್ಕಳಿಗೆ ಖುಷಿ ಆಗಿದೆ. ಮಾಜಿ ಪತ್ನಿಯರ ಜೊತೆ ಶ್ರೇಷ್ಠವಾದ ಬಾಂಧವ್ಯ ಹೊಂದಿದ್ದಕ್ಕೆ ನಾನು ಅದೃಷ್ಟವಂತ’ ಎಂದಿದ್ದಾರೆ ಆಮಿರ್ ಖಾನ್.

Comments are closed.