Prashaanth Kini Prediction : ಮುಂದಿನ ಚುನಾವಣೆಯಲ್ಲಿ ಮಂಡ್ಯದಿಂದ ಸುಮಲತಾ ವಿರುದ್ಧ ನಟ ದರ್ಶನ್ ಸ್ಪರ್ಧೆ !! ಪ್ರಶಾಂತ್ ಕಿಣಿ ಯಿಂದ ಸ್ಪೋಟಕ ಭವಿಷ್ಯ

Prashaanth Kini Prediction: ದರ್ಶನ್ ಮತ್ತು ಸುಮಲತಾ ಅಂಬರೀಶ್ ನಡುವೆ ವೈಮನಸ್ಸು ಉಂಟಾಗಿದೆ ಎಂಬ ಸುದ್ದಿ ನಾಡಿನಾದ್ಯಂತ ಭಾರಿ ಸದ್ದು ಮಾಡಿತ್ತು. ಇನ್ಸ್ಟಾಗ್ರಾಮ್ ವಾರ್ ಇದಕ್ಕೆಲ್ಲ ಎಡೆ ಮಾಡಿ ಕೊಟ್ಟಿತ್ತು. ಆದರೆ ಸುಮಲತಾ ಅವರು ದರ್ಶನ್ ಕೊನೆ ತನಕ ನನ್ನ ಮಗ ಎಂಬುದಾಗಿ ಹೇಳಿ ಎಲ್ಲ ವಿವಾದಗಳಿಗೆ ತೆರೆ ಏಳದಿದ್ದರು. ಈ ಬೆನ್ನಲ್ಲೇ ಪ್ರಶಾಂತ್ ಕಿಣಿ ಅವರು ಸ್ಪೋಟಕ ಭವಿಷ್ಯ( Prashaanth Kini Prediction) ನೋಡಿದಿದ್ದು, ಮುಂದಿನ ಚುನಾವಣೆಯಲ್ಲಿ ಮಂಡ್ಯದಿಂದ ಸುಮಲತಾ ಅಂಬರೀಶ್ ವಿರುದ್ಧ ನಟ ದರ್ಶನ್ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದಾರೆ.
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲಿನಲ್ಲಿದ್ದಾಗ ಪ್ರಶಾಂತ ಕಿಣಿ ಅವರು ‘ದರ್ಶನ್ ಈಗಾಗಲೇ ಜೈಲು ಸೇರಿ ಎರಡು ತಿಂಗಳಾಗಿದೆ. ಮುಂದಿನ 3 ತಿಂಗಳಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬರುತ್ತಾರೆ. ನಂತರ ಸಿನಿಮಾದಲ್ಲಿ ಭಾಗಿಯಾಗುತ್ತಾರೆ’ ಎಂದು ನುಡಿದಿದ್ದ ಭವಿಷ್ಯ ನಿಜವಾಗಿದೆ. ಇದೇ ವೇಳೆ ದರ್ಶನ್ 2027 ರಲ್ಲಿ ರಾಜಕೀಯ ಪ್ರವೇಶಿಸುತ್ತಾರೆ. ಅವರು ರಾಜಕೀಯದಲ್ಲಿ ಯಶಸ್ವಿಯಾಗುತ್ತಾರೆ. ಅವರು ತಮ್ಮ ಖ್ಯಾತಿಯನ್ನು ಮರಳಿ ಪಡೆಯುತ್ತಾರೆ. ಒಬ್ಬ ವ್ಯಕ್ತಿಯನ್ನು ಪದೇ ಪದೇ ಗುರಿಯಾಗಿಸಿಕೊಂಡರೆ ಎಲ್ಲರಿಗೂ ತಿಳಿದಿರುವ ಒಂದು ವಿಷಯವೆಂದರೆ ಅನೇಕ ಜನರು ಅವರ ಯಶಸ್ಸಿನ ಬಗ್ಗೆ ಅಸೂಯೆ ಪಟ್ಟಿದ್ದಾರೆ ಎಂದು ಹೇಳಿದ್ದರು.
ಇದೀಗ ನಟ ದರ್ಶನ್ ಮತ್ತು ಸುಮಲತಾ ಅವರ ಸಂಬಂಧದ ನಡುವೆ ಬಿರುಕು ಉಂಟಾಗಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಇದರ ಬೆನ್ನಲ್ಲಿಯೇ ಜ್ಯೋತಿಷಿ ಪ್ರಶಾಂತ್ ಕಿಣಿ ಮತ್ತೊಮ್ಮೆ ನಟ ದರ್ಶನ್ ಬಗ್ಗೆ ಭವಿಷ್ಯವನ್ನು ಹೇಳಿದ್ದಾರೆ. ಮಂಡ್ಯ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಅಂಬರೀಶ್ ಗೆಲುವಿನಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಚಾಲೆಂಜಿಂಗ್ ದರ್ಶನ್ ಸಂಕಷ್ಟಕ್ಕೆ ಸಿಲುಕಿದರು. ದರ್ಶನ್ ಸೇರಿದಂತೆ ಪ್ರಜ್ವಲ್ ಕೂಡ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಆದರೆ, ಯಶ್ ಮಾತ್ರ ಸಂಕಷ್ಟಕ್ಕೆ ಸಿಲುಕಲಿಲ್ಲ. ದರ್ಶನ್ ಕಾರಣದಿಂದಾಗಿಯೇ ನಟಿ ಸುಮಲತಾ ಮಂಡ್ಯದಲ್ಲಿ ಗೆದ್ದರು. ಆದರೆ, ಇದೀಗ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ ನಂತರ ಸುಮಲತಾ ದರ್ಶನ್ ಅವರನ್ನು ಕೈಬಿಟ್ಟರು. ಈಗ ದರ್ಶನ್ ಮಂಡ್ಯದಲ್ಲಿ ಮಾತ್ರ ಸುಮಲತಾ ಅವರನ್ನು ಚುನಾವಣೆಯಲ್ಲಿ ಎದುರಿಸಲಿದ್ದಾರೆ ಎಂದು ಭವಿಷ್ಯ ನುಡಿದು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದು ಸಿನಿಮಾ ಮತ್ತು ರಾಜಕೀಯ ವಲಯದಲ್ಲಿ ಒಂದು ರೀತಿ ಸಂಚಲನಕ್ಕೆ ಕಾರಣವಾಗಿದೆ.
Comments are closed.