Madikeri: ಶಾಲಾ ಕೊಠಡಿಗೆ ನುಗ್ಗಿದ ಜೇನು ಹುಳಗಳು; 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ!

Share the Article

Madikeri: ವಿರಾಜಪೇಟೆ ಸಮೀಪದ ಅಮ್ಮತ್ತಿ ಒಂಟಿಯಂಗಡಿ ಬಳಿಯ ಬೈರಂಬಾಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಳಗೆ ಜೇನು ಹುಳಗಳು ದಾಳಿ ಮಾಡಿರುವ ಘಟನೆ ಇಂದು (ಗುರುವಾರ ಮಾ.13) ನಡೆದಿದೆ.

ಜೇನು ಹುಳಗಳು ಸಮೀಪದ ದೇವರು ಕಾಡಿನಿಂದ ಶಾಲೆಯೊಳಗೆ ಬಂದಿದ್ದು, ವಿದ್ಯಾರ್ಥಿಗಳ ಮೇಲೆ ಎರ್ರಾಬಿರ್ರಿ ದಾಳಿ ಮಾಡಿದೆ. ಶಿಕ್ಷಕರು, ಶಿಕ್ಷಕಿಯರಿಗೂ ಜೇನು ಹುಳಗಳು ಕಚ್ಚಿವೆ. ಅನಂತರ ವಿಷಯ ತಿಳಿದು ಸ್ಥಳಕ್ಕೆ ಬಂದ ಗ್ರಾಮ ಪಂಚಾಯತ್‌ ಸದಸ್ಯ ಎಂ.ಎಸ್.ಪೂವಯ್ಯ ಅವರು ಮಕ್ಕಳನ್ನು ತಮ್ಮ ಜೀಪಿನಲ್ಲಿ ಒಂಟಿಯಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ನೀಡಿದ್ದಾರೆ.

ಶಾಲೆಯ ಹತ್ತು ವಿದ್ಯಾರ್ಥಿಗಳಿಗೂ ಹೆಚ್ಚು ಮಕ್ಕಳಿಗೆ ಮುಖ, ಕಣ್ಣು, ತಲೆ, ಕೈ ಭಾಗಕ್ಕೆ ಜೇನು ಹುಳಗಳು ಕಚ್ಚಿದೆ.

Comments are closed.