Uttarakhand: ಅಕ್ರಮ ಮದರಸಾಗಳ ಮೇಲೆ ಕ್ರಮ-52 ಮದರಸಾಗಳು ಬಂದ್!

Share the Article

Uttarakhand: ಧರ್ಮದ ಸೋಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಮದರಸಾಗಳ ಮೇಲೆ ಅಧಿಕಾರಿಗಳು ಕ್ರಮ ಜರುಗಿಸಿದ್ದಾರೆ. ಕೇವಲ 15 ದಿನಗಳಲ್ಲಿ 52 ಅಕ್ರಮ ಮದರಸಾಗಳನ್ನು ಸೀಲ್‌ ಮಾಡಲಾಗಿದೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಸೂಚನೆ ಬೆನ್ನಲ್ಲೇ ನೋಂದಣಿಯಾಗದ ಮತ್ತು ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಮದರಸಾಗಳನ್ನು ಸೀಲ್‌ ಮಾಡಿದ್ದಾರೆ. ಪಶ್ಚಿಮ ಡೆಹ್ರಾಡೂನ್‌ ಮತ್ತು ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಅನಧಿಕೃತ ಮದರಸಾಗಳ ಸಂಖ್ಯೆ ಬೆಳೆಯುತ್ತಿದೆ ಈ ಕುರಿತು ಗುಪ್ತಚರ ಇಲಾಖೆ ಸರಕಾರಕ್ಕೆ ಮಾಹಿತಿ ನೀಡಿತ್ತು. ಈ ವರದಿ ಆಧರಿಸಿ ಅಕ್ರಮ ಮದರಸಾಗಳನ್ನು ಬಂದ್‌ ಮಾಡಲು ಸಿಎಂ ಸೂಚನೆ ನೀಡಿದ್ದರು. ಹಾಗಾಗಿ 52 ಮದರಸಾಗಳಿಗೆ ಬೀಗ ಹಾಕಲಾಗಿದೆ.

Comments are closed.