Kaup: ಸ್ಕೂಟಿಗೆ ಅಪರಿಚಿತ ವಾಹನ ಡಿಕ್ಕಿ; ಓರ್ವ ಸಾವು, ಇನ್ನೋರ್ವ ಗಂಭೀರ!

Kaup: ರಾಷ್ಟ್ರೀಯ ಹೆದ್ದಾರಿ 66 ರ ಮೂಳೂರು, ಮಂಗಳಪೇಟೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಮೃತಪಟ್ಟ ಘಟನೆ ಮಾ.11ರ ಮಂಗಳವಾರ ಮಧ್ಯರಾತ್ರಿ ನಡೆದಿದೆ.

ಕಾಪು ನಿವಾಸಿ ಪ್ರತೀಶ್‌ ಪ್ರಸಾದ್‌ (21) ಮೃತಪಟ್ಟ ಸವಾರ. ಮತ್ತೋರ್ವ ಸವಾರ ನಿಹಾಲ್‌ ವಿಲ್ಸನ್‌ ತೀವ್ರಗಾಯಗೊಂಡಿದ್ದಾರೆ.

ಕಾಪುವಿನಿಂದ ಪಡುಬಿದ್ರಿ ಕಡೆಗೆ ತೆರಳುತ್ತಿದ್ದ ಸ್ಕೂಟಿಗೆ ಮಧ್ಯರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ರಿತೇಶ್‌ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. ಪ್ರತೀಶ್‌ ಮತ್ತು ನಿಹಾಲ್‌ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರೂ ಪ್ರತೀಶ್‌ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

ಮೃತ ಯುವಕ ಪ್ರತೀಶ್‌ ಪ್ರಸಾದ್‌ ಕಾಪುವಿನ ಹಿರಿಯ ಛಾಯಾಗ್ರಾಹಕ ಭಕ್ತಪ್ರಸಾದ್‌ ಮತ್ತು ಉಷಾ ಭಕ್ತಪ್ರಸಾದ್‌ ದಂಪತಿಯ ಪುತ್ರ. ಘಟನೆ ಕುರಿತು ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.