Actor Chethan Ahimsa: ಬೆಳ್ತಂಗಡಿಯಲ್ಲಿ 346 ಅಸಹಜವಾದ ನಿಗೂಢ ಸಾವುಗಳು; ಸೌಜನ್ಯ ಕೇಸ್‌ ಕುರಿತು ಚೇತನ್‌ ಹೇಳಿಕೆ

Actor Chethan Ahimsa: “ಧರ್ಮಸ್ಥಳ Horror; ಊರಿಗೆ ದೊಡ್ಡವರೆ ಕೊಲೆ ಮಾಡಿದವರಾ?” ಎನ್ನುವ ಶೀರ್ಷಿಕೆ ಮೂಲಕ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದ ದೂತ ಸಮೀರ್‌ ಎಂಡಿ ಅವರ ಯೂಟ್ಯೂಬ್‌ ಚಾನೆಲ್‌ ಮೂಲಕ ಮತ್ತೆ ಧರ್ಮಸ್ಥಳ ಸೌಜನ್ಯ ಕೇಸ್‌ಗೆ ಮತ್ತೆ ಹೊಸ ಟ್ವಿಸ್ಟ್‌ ದೊರಕಿತು. ಈ ವೀಡಿಯೋ ವೈರಲ್‌ ಬೆನ್ನಲ್ಲೇ ಅನೇಕ ಯೂಟ್ಯೂಬರ್‌ಗಳು ಮತ್ತೆ ಸೌಜನ್ಯ ಸಾವಿನ ಕುರಿತು ನ್ಯಾಯದ ದೊರಕಬೇಕು ಎನ್ನುವ ಕುರಿತು ತಮ್ಮ ಧ್ವನಿಯನ್ನು ಎತ್ತಿದ್ದಾರೆ.

ಇದೀಗ, ನಟ ಚೇತನ್‌ ಅಹಿಂಸಾ ಅವರು ಸೌಜನ್ಯ ಸಾವಿನ ಕುರಿತು ಇನ್ಸ್‌ಟಾಗ್ರಾಂನಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.‌ ಅದೇನೆಂದರೆ,

ಹನ್ನೊಂದು ದಿನಗಳ ಹಿಂದೆ ಸೌಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತಮವಾದ ತನಿಖಾ ಪತ್ರಿಕೋದ್ಯಮದ ವೀಡಿಯೋ ಬಂದ ನಂತರ ಕರ್ನಾಟಕದಾದ್ಯಂತ ದೊಡ್ಡ ಪ್ರಮಾಣದಲ್ಲಿ ಚರ್ಚೆಗಳು, ಹೋರಾಟಗಳು, ನ್ಯಾಯದ ಪರವಾದ ಕೂಗುಗಳು ಬರ್ತಾ ಇದ್ದಾವೆ. ಇದು ಒಳ್ಳೆಯ ಬೆಳವಣಿಗೆ ನಿನ್ನೆ ನಾನು ಕೂಡಾ ಸೌಜನ್ಯ ತಾಯಿಯವರ ಜೊತೆ ಮಾತನಾಡೋ ಅವಕಾಶ ಸಿಕ್ತು. ಅವರು ಚೇತನ್‌ ನನಗೆ ನ್ಯಾಯ ಒದಗಿಸಿಕೊಡಪ್ಪ ಎಂದು ಕೇಳಿದ್ರು. ನಾನು ಖಂಡಿತವಾಗಿಯೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದೀನಿ. ಇವತ್ತು ಅನೇಕರ ಹೋರಾಟದ ಜೊತೆಗೆ ನಮ್ಮ ಹೋರಾಟನೂ ಸೇರಿ ನಾವು ಈ ಸರಕಾರದ ಮೇಲೆ ಒತ್ತಡ ಹಾಕ್ತಾ ಇದ್ದೀನಿ. ಏನು ಅಂದ್ರೆ, ಈ ಕೇಸ್‌ನ ರೀ ಓಪನ್‌ ಮಾಡಬೇಕು. ಅದು ನ್ಯಾಯಾಂಗ ತನಿಖೆಯೇ ಆಗಿರಬಹುದು.

ಅದು ಎಸ್‌ಐಟಿ ಸ್ಪೆಷಲ್‌ ಇನ್‌ವೆಸ್ಟಿಗೇಷನ್‌ ಆಗಿರಬಹುದು. ನಮಗೆ ನ್ಯಾಯ ಬೇಕು. ಮತ್ತು ಈ ತನಿಖಾ ಪತ್ರಿಕೋದ್ಯಮದ ವೀಡಿಯೋ ಹೇಳುವ ಪ್ರಕಾರ ಸೌಜನ್ಯ ಪ್ರಕರಣದ ಜೊತೆಗೆ ಅನೇಕ ಪ್ರಕರಣಗಳು ಇಂಟರ್‌ಕನೆಕ್ಟೆಡ್‌ ಆಗಿದೆ. ನನಗೆ ಮಾಹಿತಿ ಬಂದಿರೋ ಪ್ರಕಾರ ಬೆಳ್ತಂಗಡಿಯಲ್ಲಿ 346 ಅಸಹಜವಾದ ನಿಗೂಢವಾದ ಸಾವುಗಳು ನಡೆದಿದೆ ಎನ್ನುವುದು ನನಗೆ ಗೊತ್ತಾಗಿದೆ. ನನಗೆ ಇದೆಲ್ಲವುದರ ನ್ಯಾಯ ಬೇಕು. ಇದೆಲ್ಲದರ ತನಿಖೆ ಆಗಬೇಕು. ಯಾರ ಮೇಲೆ ಆರೋಪ ಬಂದಿದೆ, ಯಾರು ತಪ್ಪಿತಸ್ಥರು ಇರಬಹುದು ಎನ್ನುವ ಪ್ರಶ್ನೆ ಮಾಡ್ತಾ ಇದ್ದಾರೆಯೋ ಜನ ಅವರಲ್ಲಿ ದೊಡ್ಡ ಪ್ರಮಾಣದ ಪ್ರಭಾವ ಇದೆ. ಹಣ ಬಲ, ತೋಳು ಬಲ, ರಾಜಕೀಯ ಬಲ, ಧರ್ಮ ಬಲ, ಜಾತಿ ಬಲ, ಅದನ್ನು ಫೈಟ್‌ ಮಾಡಬೇಕು ಅಂದರೆ ಬಹಳ ಕಷ್ಟ. ಆದರೆ ಯಾವುದು ಮಾಡಬಹುದೋ ಜನಶಕ್ತಿ, ಸಂವಿಧಾನ ಶಕ್ತಿ, ಕಾನೂನು ಶಕ್ತಿ ಮೂಲಕ ಮಾಡಬಹುದು.

ಜ್ಞಾಪಕ ಇಟ್ಟುಕೊಳ್ಳಿ, ಯಾವತ್ತಾದರೂ ಬದಲಾವಣೆ ಆಗಿದೆ, ಪರಿವರ್ತನೆ ಆಗಿದೆ ಎಂದರೆ ದಾನ, ದಯೆ, ದಾಕ್ಷಿಣ್ಯ ಮೇಲಿಂದ ಅಲ್ಲ ತಳಮಟ್ಟದ ಹೋರಾಟದಿಂದ. ಆ ಹೋರಾಟ ಮುಂದುವರಿಸೋಣ ಜೈ ಕರ್ನಾಟಕ, ಜೈ ಭೀಮ್ ಎಂದಿದ್ದಾರೆ.

ಈಗಾಗಲೇ ನಾವು ಸೌಜನ್ಯ ಪ್ರಕರಣದಲ್ಲಿ ಸರಕಾರದ ಮುಂದೆ ಬೇಡಿಕೆ ಇಟ್ಟಿದ್ದೀವಿ. ಅದು ಸೌಜನ್ಯ ಪ್ರಕರಣ ಆಗಿರಬಹುದು, 346 ಅಸಹಜ ನಿಗೂಢ ಸಾವುಗಳಿಗೆ ಈ ಕೇಸ್‌ ರೀ ಓಪನ್‌ ಆಗಬೇಕು, ಮರು ತನಿಖೆ ಆಗಬೇಕು. ನ್ಯಾಯ ಸಿಗಬೇಕು. ಆದರೆ ಹತ್ತರಿಂದ ಹನ್ನೆರಡು ದಿನಗಳಿಂದ ಒಂದು ವಿಶೇಷವಾದ ಬೇರೆದೋ ನಡೆತಾ ಇದೆ. ಆರ್ಟಿಕಲ್‌ 19 ರ ಉಲ್ಲಂಘನೆ. ಆರ್ಟಿಕಲ್‌ 19 ರ ಉಲ್ಲಂಘನೆ ಏನೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯ, ಪ್ರತಿಭಟನೆಯ ಸ್ವಾತಂತ್ರ್ಯ. ಇದು ನಮ್ಮ ಪ್ರಜಾಪ್ರಭುತ್ವದ ಬೆನ್ನೆಲುಬು. ಆರ್ಟಿಕಲ್‌ 19 ರ ಕಳೆದುಕೊಂಡಾಗ ಮಾತ್ರ ಅದರ ನಿಜವಾದ ಮಹತ್ವ ಗೊತ್ತಾಗುತ್ತದೆ. ಯೂಟ್ಯೂಬರ್‌ ಸಮೀರ್‌ ಅವರು ಅವರ ವೀಡಿಯೋ ಮೂಲಕ ಆರ್ಟಿಕಲ್‌ 19 ಎತ್ತಿ ಹಿಡಿದಿದ್ದಾರೆ. ಆದರೆ ಬಳ್ಳಾರಿ ಪೊಲೀಸರು ಸ್ವಯಂ ಪ್ರೇರಿತವಾಗಿ ಸುಮುಟೋ ಕೇಸ್‌ ದಾಖಲು ಮಾಡಿದ್ದಾರೆ. ಇದನ್ನು ಹೈಕೋರ್ಟ್‌ ರದ್ದು ಮಾಡಿದೆ. ಇದೊಂದು ಒಳ್ಳೆಯ ಬೆಳವಣಿಗೆ. ಆದರೆ ಸೌಜನ್ಯ ಪ್ರಕರಣದಲ್ಲಿ ಪೊಲೀಸರು ಹೆಂಗೆ ದಿಕ್ಕು ತಪ್ಪಿಸ್ತಾ ಇದ್ದಾರೆ ಮತ್ತು ಪ್ರಭಾವಿಗಳನ್ನು ಹೆಂಗೆ ಪ್ರೊಟೆಕ್ಟ್‌ ಮಾಡ್ತಾ ಇದ್ದಾರೆ ಕವರಪ್‌ ಮಾಡ್ತಾ ಇರುವ ಆರೋಪ ನಮಗೆ ಎದ್ದು ಕಾಣ್ತಾ ಇದೆ.

ನಮಗೆ ಇವತ್ತಿನ ದಿನ ದೊಡ್ಡ ಪ್ರಮಾಣದಲ್ಲಿ ಪೊಲೀಸ್‌, ವ್ಯವಸ್ಥೆನೇ ಸುಧಾರಣೆ ಆಗಬೇಕು. ಪೊಲೀಸರು ನ್ಯಾಯದ ಪರವಾಗಿ ಕೆಲಸ ಮಾಡುವ ಪೊಲೀಸ್‌ ಸಿಸ್ಟಂ ನಮಗೆ ಬೇಕಿದೆ. ಮತ್ತೆ ಬೆಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ವಿಚಿತ್ರವಾದ ಜ್ಞಾನವಂತರು, ಹೋರಾಟಗಾರರು, ಸೌಜನ್ಯ ಪ್ರಕರಣ ಚರ್ಚೆ ಮಾಡಬೇಕೆಂದು ಬಂದಾಗ ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತು ಹಾಕಿದ ಪರ್ಮಿಷನ್‌ ಕೊಟ್ಟಿಲ್ಲ ಎನ್ನುವ ಆರೋಪ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನೀವು ಬಸವ ತತ್ವ ಅಂತೀರಾ, ನೀವು ಸಂವಿಧಾನ ಅಂತೀರಾ, ನೀವು ಆರ್ಟಿಕಲ್‌ 19 ಎತ್ತಿ ಹಿಡಿಯೋದು ನಿಮ್ಮ ಕರ್ತವ್ಯ, ನಾವೆಲ್ಲ ಹೋರಾಟಗಾರರು, ನಾವು ಜೈಲಿಗೆ ಹೋಗಲು ಸಿದ್ಧರಿದ್ದೇವೆ. ಕಾನೂನು ಉಲ್ಲಂಘನೆ ಮಾಡಿ ಜೈಲಿಗೆ ಹೋಗೋದಲ್ಲ. ಸತ್ಯ ನುಡಿದು ಜೈಲಿಗೋಕೆ ರೆಡಿ ಇದ್ದೀವಿ, ಜೈ ಕರ್ನಾಟಕ ಜೈ ಭೀಮ್‌

Comments are closed.