Home News Renukaswamy Murder Case: ನನ್ನ ಮಗನನ್ನು ಹತ್ಯೆ ಮಾಡಿದವರಿಗೆ ಶಿಕ್ಷೆಯಾಗಲಿ-ರೇಣುಕಾಸ್ವಾಮಿ ತಂದೆ ಗೋಕರ್ಣದಲ್ಲಿ ಪ್ರಾರ್ಥನೆ

Renukaswamy Murder Case: ನನ್ನ ಮಗನನ್ನು ಹತ್ಯೆ ಮಾಡಿದವರಿಗೆ ಶಿಕ್ಷೆಯಾಗಲಿ-ರೇಣುಕಾಸ್ವಾಮಿ ತಂದೆ ಗೋಕರ್ಣದಲ್ಲಿ ಪ್ರಾರ್ಥನೆ

Hindu neighbor gifts plot of land

Hindu neighbour gifts land to Muslim journalist

Renukaswamy Murder Case: ನಟ ದರ್ಶನ್‌ ಮತ್ತು ಗ್ಯಾಂಗ್‌ನಿಂದ ಹತ್ಯೆಗೊಳಗಾಗಿದ್ದ ಚಿತ್ರದುರ್ಗ ರೇಣುಕಾಸ್ವಾಮಿ ಕುಟುಂಬದವರು ಗೋಕರ್ಣಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ರೇಣುಕಸ್ವಾಮಿಗೆ ಮೋಕ್ಷ ಕರುಣಿಸುವಂತೆ ಪ್ರಾರ್ಥನೆ ಮಾಡಿರುವ ಕುರಿತು ವರದಿಯಾಗಿದೆ.

ತಂದೆ ಕಾಶಿನಾಥ ಗೌಡ, ಪತ್ನಿ, ಸೊಸೆ, ಮೊಮಗ ಗೋರ್ಕಣಕ್ಕೆ ಭೇಟಿ ನೀಡಿದ್ದು, ವೀರಶೈವ ವಸತಿ ಗೃಹದಲ್ಲಿ ಉಳಿದುಕೊಂಡಿದ್ದರು. ನಂತರ ಅವರು ತಮ್ಮ ಮಗನಿಗೆ ಆದ ಪರಿಸ್ಥಿತಿ ಯಾರಿಗೂ ಆಗಬಾರದು. ನನ್ನ ಮಗನ ಹತ್ಯೆ ಮಾಡಿದ ಎಲ್ಲಾ ಆರೋಪಿಗಳಿಗೂ ಶಿಕ್ಷೆಯಾಗಬೇಕು. ಹಾಗೂ ಸೊಸೆಗೆ ಸರಕಾರಿ ಕೆಲಸ ಸಿಗಬೇಕು ಎಂದು ತಂದೆ ಕಣ್ಣೀರು ಹಾಕಿರುವ ಕುರಿತು ವರದಿಯಾಗಿದೆ.

ಇನ್ನು ಇತ್ತ ರೇಣುಕಾಸ್ವಾಮಿ ಕುಟುಂಬದವರು ಹೋದ ನಂತರ, ನಟ ದರ್ಶನ್‌ ಗೌಪ್ಯವಾಗಿ ಗೋಕರ್ಣಕ್ಕೆ ಬಂದಿದ್ದು, ಅರ್ಚಕರೊಬ್ಬರ ಮನೆಯಲ್ಲಿ ಒಂದು ದಿನ ಉಳಿದು ಪ್ರಕರಣದಿಂದ ಪಾರು ಮಾಡುವಂತೆ, ಜಾಮೀನು ಮುಂದುವರಿಕೆ ಕುರಿತು ಹೋಮ-ಯಜ್ಞ ಮಾಡಿ ಶಿಕ್ಷೆಯಿಂದ ಪಾರು ಮಾಡುವಂತೆ ಅರ್ಚಕರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಅರ್ಚಕರು ದರ್ಶನ್‌ ಗೆ ಧೈರ್ಯ ಹೇಳಿ ಹೋಮ-ಯಜ್ಞ ಮಾಡಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.