Actor Darshan: ಬೆಸ್ಟ್ ಆಕ್ಟಿಂಗ್ ಆಸ್ಕರ್ ಅವಾರ್ಡ್ ಗೋಸ್ ಟು…..ದರ್ಶನ್ ಅನ್‌ಫಾಲೋ ಬೆನ್ನಲ್ಲೇ ಸುಮಲತಾ ಪೋಸ್ಟ್

Actor Darshan: ಸ್ಯಾಂಡಲ್‌ವುಡ್ ನಟ ದರ್ಶನ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಫಾಲೋ ಮಾಡ್ತಿದ್ದ ಆರು ಮಂದಿಯನ್ನು ಅನ್‌ಫಾಲೋ ಮಾಡಿದ್ದಾರೆ. ಇದರಲ್ಲಿ ತಾಯಿ ಸಮಾನರಾದ ಸುಮಲತಾ ಅಂಬರೀಶ್ ಅವರನ್ನು ಕೂಡಾ ಅನ್‌ಫಾಲೋ ಮಾಡಿದ್ದಾರೆ. ಇದಾದ ಬಳಿಕ ಸುಮಲತಾ ಅವರು ಪೋಸ್ಟ್‌ವೊಂದನ್ನು ಹಾಕಿದ್ದು, ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.

ಬೆಸ್ಟ್ ಆಕ್ಟಿಂಗ್ ಆಸ್ಕರ್ ಅವಾರ್ಡ್ ಯಾರಿಗೆ ಹೋಗುತ್ತೆ ಅಂದ್ರೆ.. ಯಾರು ಸತ್ಯವನ್ನ ತಿರುಚುತ್ತಾರೋ, ತಮ್ಮದೇ ತಪ್ಪು ಇಟ್ಕೊಂಡು ಬೇರೆಯವರ ಮೇಲೆ ಹಾಕಿ ನೋವು ಮಾಡೋದು, ತಮ್ಮ ಮೇಲಿನ ನಿಂದನೆಯನ್ನ ಬೇರೆಯವರ ಮೇಲೆ ಹಾಕೋದು, ಗೂಬೆ ಕೂರಿಸೋದು ಮಾಡಿ ತಮ್ಮನ್ನ ತಾವು ಹೀರೋ ಎಂಬಂತೆ ಬಿಂಬಿಸಿಕೊಳ್ಳೋದು ಎಂದು ಸುಮಲತಾ ಅವರು ಪೋಸ್ಟ್ ಮಾಡಿದ್ದಾರೆ.
ಒಂದು ಕಡೆ ಅಭಿಮಾನಿಗಳಿಗೆ ದರ್ಶನ್ ಯಾಕೆ ಎಲ್ಲರನ್ನೂ ಅನ್‌ಫಾಲೋ ಮಾಡಿದ್ದಾರೇ ಅನ್ನೋ ಕುತೂಹಲದ ಜೊತೆಗೆ ಇತ್ತ ಕಡೆ ಸುಮಲತಾ ಅಂಬರೀಶ್ ಅವರ ಪೋಸ್ಟ್ ಕೂಡಾ ಪ್ರಶ್ನೆಯನ್ನುಂಟು ಮಾಡಿದೆ.


Comments are closed.