Ramesh Aravind: ರಮೇಶ್ ಅರವಿಂದ್ ನೇತೃತ್ವದಲ್ಲಿ ಹೊಸ ಶೋ!!

Ramesh Aravind: ಕನ್ನಡದ ನಟ ರಮೇಶ್ ಅರವಿಂದ್(Ramesh Aravind) ಎಂದರೆ ಹಲವರಿಗೆ ಅಚ್ಚುಮೆಚ್ಚು. ಅವರ ಸ್ಪೂರ್ತಿಯ ಮಾತು, ಮಂದಹಾಸದ ಮುಖ, ಹುರಿದುಂಬಿಸುವ ನುಡಿಗಳು ಇಂತವರನ್ನು ಕೂಡ ಪುಳಕಗೊಳಿಸುತ್ತದೆ. ಅವರೇ ನಡೆಸಿಕೊಡುತ್ತಿದ್ದಂತಹ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮ ಅಂತ ನಾಡಿನದ್ಯಂತ ಜನಪ್ರಿಯಗೊಳಿಸಿತ್ತು. ಇಂದಿಗೂ ಕೂಡ ಕನ್ನಡದ ಜನತೆ ಈ ಕಾರ್ಯಕ್ರಮಕ್ಕಾಗಿ ಕಾದು ಕುಳಿತಿದೆ. ಅಲ್ಲದೆ ಅವರ ನೇತೃತ್ವದಲ್ಲಿ ಯಾವುದೇ ಶೋ ಬಂದರೂ ಕೂಡ ನಿರಂತರವಾಗಿ ವೀಕ್ಷಿಸಲು ಕಾತರವಾಗಿದೆ. ಅದರಂತೆ ಇದೀಗ ರಮೇಶ್ ಅರವಿಂದ್ ನೇತೃತ್ವದಲ್ಲಿ ಹೊಸ ಶೋ ಸದ್ಯದಲ್ಲೇ ಆರಂಭವಾಗಲಿದೆ.

ಹೌದು, ರಮೇಶ್ ಅರವಿಂದ ಅವರ ನೇತೃತ್ವದಲ್ಲಿ ‘ಮಹಾನಟಿ ಸೀಸನ್ 2’ ಸದ್ಯದಲ್ಲೇ ಆರಂಭವಾಗಲಿದೆ. ಅಂದಹಾಗೆ ರಮೇಶ್ ಅರವಿಂದ್ ಅವರು ಇತ್ತೀಚಿಗೆ ಸರಿಗಮಪ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಮಹಾ ನಟಿ ಶೋ ಆರಂಭದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.
ಇನ್ನೂ ರಮೇಶ್ ಅರವಿಂದ್ ಅವರು ‘ಮಹಾನಟಿ’ ಶೋನಲ್ಲಿ ಜಡ್ಜ್ ಸ್ಥಾನದಲ್ಲಿ ಇದ್ದರು. ಇವರ ಜೊತೆ ನಟಿ ಪ್ರೇಮಾ, ತರುಣ್ ಸುಧೀರ್ ಮತ್ತು ನಟಿ ನಿಶ್ವಿಕಾ ನಾಯ್ಡು ಕೂಡ ಇದ್ದರು. ಅನುಶ್ರೀ ಈ ಶೋ ನಿರೂಪಣೆ ಮಾಡಿದ್ದರು. ಈಗ ಇದಕ್ಕೆ ಎರಡನೇ ಸೀಸನ್ ಬರುತ್ತಿದೆ. ಇದರಲ್ಲಿ ರಮೇಶ್ ಅರವಿಂದ್ ಜಡ್ಜ್ ಸ್ಥಾನದಲ್ಲಿ ಮುಂದುವರಿಯುವುದ ಬಹುತೇಕ ಖಚಿತವಾಗಿದೆ. ಆದರೆ, ಉಳಿದಂತೆ ಯಾರೆಲ್ಲ ಇರುತ್ತಾರೆ ಎನ್ನುವ ಕುತೂಹಲ ಮೂಡಿದೆ.
Comments are closed.