Pregnant: ಗರ್ಭಿಣಿ ಕಾರ್ಮಿಕ ಮಹಿಳೆಯರಿಗೆ ಸಿಹಿ ಸುದ್ದಿ ಇಲ್ಲಿದೆ!

Share the Article

Pregnant: ಮಹಿಳಾ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರ, ಇದೀಗ ಗರ್ಭಿಣಿ (Pregnant) ಕಾರ್ಮಿಕ ಮಹಿಳೆಯರಿಗೆ ಸಹಾಯಧನ ನೀಡಲು ಮುಂದಾಗಿದೆ. ಸರ್ಕಾರದ ಪ್ರಕಾರ, ಮಂಡಳಿಯಲ್ಲಿ ನೋಂದಾಯಿತ ಮಹಿಳಾ ಕಾರ್ಮಿಕರು ತಮ್ಮ ಮೊದಲ ಎರಡು ಹೆರಿಗೆಗಳಿಗೆ ಸಹಾಯಧನ ಪಡೆಯಲು ಅರ್ಹರಾಗಿದ್ದಾರೆ.

ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆಗಳು:

ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕ ಮಹಿಳೆಯಾಗಿರಬೇಕು. ಈ ನೆರವು ಮೊದಲ ಎರಡು ಹೆರಿಗೆಗಳಿಗೆ ಮಾತ್ರ ಲಭ್ಯ. ಈಗಾಗಲೇ ಇಬ್ಬರು ಮಕ್ಕಳಿದ್ದರೆ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ. ಮಗುವಿನ ಜನನದ ದಿನಾಂಕದಿಂದ 6 ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಮಹಿಳಾ ಕಾರ್ಮಿಕರು ಅಗತ್ಯ ದಾಖಲೆಗಳೊಂದಿಗೆ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ ಕಾರ್ಮಿಕ ಸಹಾಯವಾಣಿ 155214 ಸಂಪರ್ಕಿಸಬಹುದು.

Comments are closed.