Srinagar: ರಮಜಾನ್‌ ವೇಳೆ ಫ್ಯಾಶನ್ ಶೋ

Share the Article

Srinagar: ರಮಜಾನ್‌ ಉಪವಾಸದ ಮಾಸದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೌಂದರ್ಯ ಸ್ಪರ್ಧೆಯೊಂದು ನಡೆದಿರುವುದಕ್ಕೆ ಧಾರ್ಮಿಕ ಮಾತ್ರವಲ್ಲದೆ ರಾಜಕೀಯ ವಲಯದಿಂದಲೂ ಆಕ್ರೋಶ ವ್ಯಕ್ತವಾಗಿದೆ. ಗುಲ್ಮಾರ್ಗ್ ನ ಒಂದು ರೆಸಾರ್ಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರುಷರು ಮತ್ತು ಮಹಿಳೆಯರು ತುಂಡುಡುಗೆ ತೊಟ್ಟು ಅರೆನಗ್ನರಾಗಿ ಲ್ಯಾಂಪ್‌ ವಾಕ್ ನಡೆಸಿದ್ದ ದೃಶ್ಯದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿವೆ. ಇದು ರಾಜ್ಯದ ಸಾಂಸ್ಕೃತಿಕ ಮೌಲ್ಯಗಳನ್ನು ನಾಶ ಮಾಡಿದೆ ಎಂದು ಟೀಕಾಕಾರರು ವಾದಿಸಿದ್ದಾರೆ. ಜನರ ಆಘಾತ ಹಾಗೂ ಆಕ್ರೋಶ ತಮಗೆ ಅರ್ಥವಾಗಿದೆ ಎಂದು ಮುಖ್ಯಮಂತ್ರಿ ಒಮ‌ರ್ ಅಬ್ದುಲ್ಲಾ ಹೇಳಿದ್ದಾರೆ. ಪ್ರಕರಣದ ಕುರಿತು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿರುವ ಅಬ್ದುಲ್ಲಾ, ಕ್ರಮಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದಾರೆ.

Comments are closed.