Holi 2025: ಶೀಘ್ರದಲ್ಲಿ ಬರಲಿದೆ ಹೋಳಿ ಹಬ್ಬ! ಬಣ್ಣಗಳಲ್ಲಿ ಆಡುವ ಹಬ್ಬ ಹೋಳಿಗೆ ಈ ರೀತಿ ರೆಡಿ ಆಗಿ!

Holi 2025: ಈ ಬಾರಿ ಮಾರ್ಚ್ 13 ರಂದು ಹೋಳಿ ಹಬ್ಬ (Holi Festivals) ವನ್ನು ಆಚರಿಸಲಾಗುತ್ತದೆ. ಬಣ್ಣಗಳ ಜೊತೆಗೆ ಬಾಂಧವ್ಯವನ್ನು ಬೆಸೆಯುವ ಹಬ್ಬವಾಗಿದ್ದು, ಬಣ್ಣಗಳೇ ಪ್ರಮುಖವಾದ ಆಕರ್ಷಣೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಹೋಳಿ ಆಡುವ ಮುನ್ನ ಹಾಗೂ ನಂತರದಲ್ಲಿ ತ್ವಚೆ ಆರೋಗ್ಯ ಕಾಪಾಡಲು ಇಲ್ಲಿದೆ ಕೆಲವು ಟಿಪ್ಸ್.

ಹೋಳಿ ಹಬ್ಬದಂದು ಚರ್ಮ ಆರೈಕೆಗೆ ಇಲ್ಲಿದೆ ಟಿಪ್ಸ್
ಉದ್ದವಾದ ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸಿ : ಹೋಳಿ ಆಡುವಾ ನಿಮ್ಮ ಮೈ ಕೈ ಕಾಲುಗಳನ್ನು ಮುಚ್ಚಿಕೊಳ್ಳುವ ಬಟ್ಟೆಗಳನ್ನೆ ಧರಿಸಿ. ಇದು ದೇಹದ ಭಾಗಗಳಿಗೆ ನೇರವಾಗಿ ಬಣ್ಣಗಳು ಬೀಳದಂತೆ ತಡೆಯುತ್ತದೆ.
ಮುಖಕ್ಕೆ ಐಸ್ ಕ್ಯೂಬ್ ಹಚ್ಚಿ ಕೊಳ್ಳಿ : ಹೋಳಿ ಹಬ್ಬದ ದಿನ ಆಟ ಆಡಲು ಹೋಗುವ ಮುಂಚೆ ಚರ್ಮಕ್ಕೆ ಐಸ್ ಕ್ಯೂಬ್ ಹಚ್ಚಿ ಮಸಾಜ್ ಮಾಡಿಕೊಳ್ಳುವುದು ಬಹಳ ಮುಖ್ಯ. ಇದು ಚರ್ಮದ ರಂಧ್ರಗಳನ್ನು ಮುಚ್ಚಲು ಸಹಾಯ ಮಾಡಿ ಚರ್ಮದೊಳಗೆ ಬಣ್ಣಗಳು ಸೇರದಂತೆ ತಡೆದು ತ್ವಚೆಯ ಆರೈಕೆ ಮಾಡುತ್ತದೆ.
ಮಾಯಿಶ್ಚರೈಸರ್ ಬಳಕೆ ಮಾಡಿ : ಚರ್ಮದ ಆರೈಕೆಯಲ್ಲಿ ಮಾಯಿಶ್ಚರೈಸರ್ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸಿ ಬಣ್ಣದ ಹಾನಿಕಾರಕ ಅಂಶಗಳು ತ್ವಚೆಯೊಳಗೆ ಸೇರಿಕೊಳ್ಳುವುದುನ್ನು ಮಾಯ್ಚರೈಸರ್ ತಡೆಯುತ್ತದೆ .
ಸನ್ ಸ್ಕ್ರೀನ್ ಬಳಕೆ ಇರಲಿ :
ನಿಮ್ಮ ದೇಹವು ಬಟ್ಟೆಯಿಂದ ಮುಚ್ಚಲ್ಪಡುತ್ತದೆ ಎಂದು ಕೊಂಡು ಸನ್ ಸ್ಕ್ರೀನ್ ಬಳಸುವುದನ್ನು ನಿರ್ಲಕ್ಷಿಸಬೇಡಿ. ಹೋಳಿ ಸಮಯದಲ್ಲಿ ಚರ್ಮವು ಕಳೆಗುಂದುತ್ತದೆ. ಹೀಗಾಗಿ ಇದರಿಂದ ರಕ್ಷಣೆ ಪಡೆಯಲು ಎಸ್ಪಿಎಫ್ ಉತ್ಪನ್ನಗಳನ್ನು ಬಳಸಿ.
ಫೇಸ್ ಮಾಸ್ಕ್ ಅನ್ವಯಿಸುವುದನ್ನು ಮರೆಯಬೇಡಿ :
ಬಣ್ಣಗಳು ಮುಖದ ಚರ್ಮವನ್ನು ಒರಟಾಗಿಸಬಹುದು. ಹೀಗಾಗಿ ಹೋಳಿಯಾಡಲು ಹೋಗುವ ಮುನ್ನ ನೈಸರ್ಗಿಕವಾಗಿರುವ ಫೇಸ್ ಮಾಸ್ಕ್ ಬಳಕೆ ಮಾಡುವುದು ಉತ್ತಮ.
ಚರ್ಮಕ್ಕೆ ಎಣ್ಣೆಯನ್ನು ಅನ್ವಯಿಸಿಕೊಳ್ಳಿ :
ಹೋಳಿಯಾಡಲು ಹೋಗುವ ಮುನ್ನ ತ್ವಚೆಗೆ ಎಣ್ಣೆ ಹಚ್ಚುವುದರಿಂದ ತ್ವಚೆಯೂ ಬಣ್ಣವನ್ನು ಹೀರಿಕೊಳ್ಳುವುದು ಕಡಿಮೆ ಮಾಡುತ್ತದೆ. ಈ ರೀತಿ ಎಣ್ಣೆ ಮಸಾಜ್ ಮಾಡಿ ಸ್ನಾನ ಮಾಡುವುದರಿಂದ ಬಣ್ಣ ಕೂಡ ಬೇಗನೇ ಹೋಗುತ್ತದೆ.
ಮೇಕಪ್ ನಿಂದ ದೂರವಿರಿ:
ಬಣ್ಣಗಳ ಎರಚಾಡುವಾಗ ಮೇಕಪ್ ಇಲ್ಲದೇ ಇದ್ದರೇನೇ ಒಳ್ಳೆಯದು. ಬಣ್ಣದೊಂದಿಗೆ ಮೇಕಪ್ ನೊಂದಿಗೆ ಸೇರಿ ಮುಖವು ಹಾಳಾಗುತ್ತದೆ. ಮೊಡವೆಗಳು ಮೂಡುವ ಸಾಧ್ಯತೆಯು ಹೆಚ್ಚಾಗಿರುವುದರಿಂದ ಮೇಕಪ್ ಮಾಡದೇ ಇರುವುದು ಉತ್ತಮ.
Comments are closed.