Actress Ranya Rao: 15 ದಿನ ನ್ಯಾಯಾಂಗ ಬಂಧನ; ನಟಿ ಪರಪ್ಪನ ಅಗ್ರಹಾರಕ್ಕೆ!

Actress Ranya Rao: ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಡಿಆರೈ ಅಧಿಕಾರಿಗಳ ವಶದಲ್ಲಿದ್ದ ನಟಿ ರನ್ಯಾ ರಾವ್ ಇಂದು ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಆರ್ಥಕಕ ಅಪರಾಧಗಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನಟಿ ರನ್ಯಾ ರಾವ್ಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯವು ಆದೇಶ ಹೊರಡಿಸಿದೆ.

ರನ್ಯಾ ರಾವ್ಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಟಿ ರನ್ಯಾ ರಾವ್ ಪರಪ್ಪನ ಅಗ್ರಹಾರದ ಜೈಲು ಪಾಲಾಗಿದ್ದಾರೆ.
ಡಿಆರ್ಐ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿರುವ ಇನ್ನೋರ್ವ ಆರೋಪಿ ತರುಣ್ ರಾಜುನನ್ನು ಐದು ದಿನಗಳ ಕಾಲ ಡಿಆರ್ಐ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ನಟಿ ರನ್ಯಾ ರಾವ್ ಸ್ನೇಹಿತನಾಗಿದ್ದು, ತರುಣ್ ರಾಜುನನ್ನು ವಿಚಾರಣೆಗೊಳಪಡಿಸಿದ್ದ ಡಿಆರ್ಐ ಅಧಿಕಾರಿಗಳು ನಿನ್ನೆ ರಾತ್ರಿ ಬಂಧನ ಮಾಡಿದ್ದರು.
ತರುಣ್ ರಾಜುನನ್ನು ಆರ್ಥಿಕ ಅಪರಾಧಗಳ ನ್ಯಾಯಾಲಯದ ಜಡ್ಜ್ ಮುಂದೆ ಅಧಿಕಾರಿಗಳು ಹಾಜರುಪಡಿಸಿದ್ದು, ಈ ವೇಳೆ ಮಾ.15 ರವರೆಗೆ ತರುಣ್ ರಾಜುನನ್ನು ಡಿಆರ್ಐ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
Comments are closed.