Chakravarthy sulibele: ಹುಡುಗಿ ಸಿಗದ ಹುಡುಗರು ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ: ಚಕ್ರವರ್ತಿ ಸೂಲಿಬೆಲೆ ಕರೆ

Share the Article

chakravarthy sulibele: ವಿಶ್ವ ಹಿಂದೂ ಪರಿಷತ್ ವತಿಯಿಂದ ಭಾನುವಾರ ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರಕ್ಕೆ ನಡೆದ ‘ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ’ ಪಾದಯಾತ್ರೆಯ ಸಮಾರೋಪದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ (chakravarthy sulibele)
‘ಮದುವೆಯಾಗಲು ಹುಡುಗಿ ಸಿಗದ ಹಿಂದೂ ಹುಡುಗರು ಅನ್ಯಧರ್ಮೀಯ ಯುವತಿಯರನ್ನು ಪ್ರೀತಿಸಿ ವಿವಾಹವಾಗಿ’ ಎಂದು ಸಲಹೆ ನೀಡಿದ್ದಾರೆ.

ಮತಾಂತರ, ಲವ್ ಜಿಹಾದ್ ವಿಚಾರಗಳನ್ನು ಬಿಟ್ಟು ಬಿಡಿ. ಹಿಂದೂಧರ್ಮದಿಂದ ಮತಾಂತರವಾದವರನ್ನ ಮತ್ತೆ ‘ಘರ್ ವಾಪಸಿ’ ಮಾಡುವುದು ಹೇಗೆಂದು ನಮ್ಮ ಯುವಕರನ್ನ ತರಬೇತುಗೊಳಿಸಿ.
ಎಷ್ಟು ದಿನ ನಮ್ಮ ಧರ್ಮದ ಯುವತಿಯರನ್ನೇ ನೋಡುತ್ತೀರಾ..?ಅನ್ಯಧರ್ಮದ ಯುವತಿಯರನ್ನು ಮದುವೆಯಾಗಿ ಪ್ರೀತಿಸಿ ಎಂದು ಮಂಗಳೂರಿನಲ್ಲಿ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದ್ದಾರೆ. ಇದೀಗ ದಕ್ಷಿಣ ಕನ್ನಡದ ಉಳ್ಳಾಲ ತಾಲೂಕಿನ ಕುತ್ತಾರಿ ನಲ್ಲಿ ನೀಡಿದ ಚಕ್ರವರ್ತಿ ಸೂಲಿಬೆಲೆ ಹೇಳಿಕೆ ಪರ ವಿರೋಧ ಚರ್ಚೆಗಳಿಗೆ ಕಾರಣವಾಗಿದೆ.

ಎಲ್ಲಿವರೆಗೆ ಲವ್ ಜಿಹಾದ್ ಬಗ್ಗೆ ಮಾತನಾಡುತ್ತಿರೋಣ. ಸ್ವಲ್ಪ ಬದಲಾವಣೆಯನ್ನು ತರೋಣ. ಹುಡುಗಿ ಸಿಗುತ್ತಿಲ್ಲ ಅಂತ ಎಷ್ಟು ದಿನ ನಮ್ಮ ಸಮುದಾಯದ ಹೆಣ್ಣು ಮಕ್ಕಳನ್ನು ನೋಡುತ್ತಿರಾ..?ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದು ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದ್ದಾರೆ.

ಇನ್ನು ವಕ್ಸ್ ವಿರುದ್ಧ ದೇಶದೆಲ್ಲೆಡೆ ಹೋರಾಟ ನಡೆಯುತ್ತಿರುವಾಗ ರಾಜ್ಯ ಸರ್ಕಾರ, ವಕ್ಸ್ ಆಸ್ತಿಯ ನವೀಕರಣಕ್ಕೆ ₹150 ಕೊಟಿ ನೀಡಲು ಹೊರಟಿದೆ. ಸರ್ಕಾರ ಪ್ರಚೋದನೆ ನೀಡಿ ಪ್ರತ್ಯೇಕತೆಯನ್ನು ಹುಟ್ಟುಹಾಕುವ ಪ್ರಯತ್ನಕ್ಕೆ ಮುಂದಾಗಿದೆ’ ಎಂದರು.

Comments are closed.