Actress Ranya Rao: KIADB ಯಿಂದ ರನ್ಯಾ ರಾವ್‌ಗೆ ಜಮೀನು ಮಂಜೂರು ಮಾಡಿಲ್ಲ-ಸಿಇಓ ಸ್ಪಷ್ಟನೆ

Share the Article

Actress Ranya Rao: ರನ್ಯಾ ರಾವ್‌ಗೆ ಕೆಐಎಡಿಬಿಯಿಂದ ಯಾವುದೇ ಜಮೀನು ಮಂಜೂರು ಮಾಡಿಲ್ಲ ಎಂದು ಕೆಐಎಡಿಬಿ (KIADB) ಸಿಇಓ ಡಾ.ಮಹೇಶ್‌ ಸ್ಪಷ್ಟನೆ ನೀಡಿದ್ದಾರೆ.

ರನ್ಯಾ ರಾವ್‌ ಗೆ ಸರಕಾರದಿಂದ ಜಮೀನು ಮಂಜೂರು ಕುರಿತು ಮಾದ್ಯಮದ ಜೊತೆ ಮಾತನಾಡಿದ ಸಿಇಓ ಅವರು, ಶಿರಾ ಬಳಿ ಮಂಜೂರು ಆಗಿರೋ ಜಾಗ ಕೆಐಎಡಿಬಿ ವಶದಲ್ಲಿ ಇದೆ. ತುಮಕೂರಿನ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಇದುವರೆಗೆ ಹಣ ಕಟ್ಟಿ ಕಂಪನಿ ತನ್ನ ಸ್ವಂತಕ್ಕೆ ಮಾಡಿಕೊಂಡಿಲ್ಲʼ ಎಂದು ಹೇಳಿರುವ ಕುರಿತು ವರದಿಯಾಗಿದೆ.

2023 ಜನವರಿ 25 ರಂದು ಸಚಿವರು ಮತ್ತು ಸದಸ್ಯರನ್ನ ಒಳಗೊಂಡ ಸ್ಟೇಟ್ ಲೆವೆಲ್ ವಿಂಡೋ ಕಮಿಟಿ ಕ್ಲಿಯರೆನ್ಸ್ ಕೊಟ್ಟಿದೆ. ಕಮಿಟಿ ಕ್ಲಿಯರೆನ್ಸ್ ಕೊಟ್ಟ ಮೇಲೆ ಕಂಪನಿ ಕಡೆಯಿಂದ ಜಾಗ ಮಂಜೂರು ಮಾಡಿ ಎಂದು ಹೇಳಿಲ್ಲ. ಹಾಗಾಗಿ ಕೆಐಎಡಿಬಿಯಿಂದ ಯಾವುದೇ ಜಾಗ ಮಂಜೂರು ಆಗಿಲ್ಲ. ಜನರಲ್ ಕ್ಯಾಟಗಿರಿಯಲ್ಲಿ ಕ್ಲಿಯರೆನ್ಸ್ ಸಿಕ್ಕಿತ್ತು ಎಂದರು.

ಸಿಂಗಲ್ ವಿಂಡೋ ಕಮಿಟಿಯಲ್ಲಿ ಕ್ಲಿಯರೆನ್ಸ್ ಸಿಕ್ಕಿದ ಮೇಲೆ ಜಾಗ ಪಡೆಯಲು ಎರಡು ವರ್ಷಗಳ ಕಾಲ ಸಮಯ ಇರುತ್ತದೆ. ಕ್ಲಿಯರೆನ್ಸ್ ಸಿಕ್ಕಿಯೇ ಎರಡು ವರ್ಷ ಮುಕ್ತಾಯ ಆಗಿದೆ. ಹಾಗಾಗಿ ಜಾಗ ಈಗ ಮಂಜೂರು ಮಾಡೋಕೆ ಬರಲ್ಲ. ಜಾಗ ಬೇಕು ಅಂದರೆ ಮತ್ತೆ ಅಪ್ಲೈ ಮಾಡಿಕೊಳ್ಳಬೇಕು ಎಂದು ಪಬ್ಲಿಕ್‌ ಟಿವಿ ಮಾಧ್ಯಮಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.

 

Comments are closed.