Maternity Allowance: ಗರ್ಭಿಣಿಯರಿಗೆ ಗುಡ್ ನ್ಯೂಸ್- ‘ಹೆರಿಗೆ ಸಹಾಯಧನ’ ಘೋಷಿಸಿದ ಸರ್ಕಾರ!!

Share the Article

Maternity Allowance: ಮಹಿಳಾ ಕಲ್ಯಾಣದ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಘೋಷಿಸಿರುವ ಸರ್ಕಾರ ಇದೀಗ ಗರ್ಭಿಣಿ ಮಹಿಳೆಯರಿಗಾಗಿ ಹೆರಿಗೆ ಸಹಾಯಧನವನ್ನು ಕೂಡ ಘೋಷಣೆ ಮಾಡಿದೆ.

ಹೌದು, ಕಾರ್ಮಿಕ ಮಹಿಳೆಯರಾಗಿದ್ದು ಅವರು ಫಲಾನುಭವಿಗಳಾಗಿದ್ದರೆ ಅವರ ಮೊದಲ ಎರಡು ಹೆರಿಗೆಗಳಿಗೆ ಮಂಡಳಿಯು ಸಹಾಯಧನ ಘೋಷಿಸುವುದಾಗಿ ಸರ್ಕಾರ ತಿಳಿಸಿದೆ. ಅಲ್ಲದೆ ಫಲಾನುಭವಿಯು ಅಗತ್ಯ ದಾಖಲೆಗಳೊಂದಿಗೆ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಹೇಳಿದೆ.

ಸೌಲಭ್ಯ ಪಡೆಯಲು ಹೊ೦ದಿರಬೇಕಾದ ಅರ್ಹತೆಗಳು
* ಮ೦ಡಳಿಯಲ್ಲಿ ನೋಂದಾಯಿತ ಕಾರ್ಮಿಕರಾಗಿರಬೇಕು
* ಮೊದಲ ಎರಡು ಹೆರಿಗೆಗೆ ಮಾತ್ರ ಸಹಾಯಧನ ಮಂಜೂರು ಮಾಡಲಾಗುವುದು
* ಈಗಾಗಲೇ ನೋಂದಾಯಿತ ಮಹಿಳಾ ಕಾರ್ಮಿಕಳಿಗೆ ಇಬ್ಬರು ಮಕ್ಕಳಿದ್ದಲ್ಲಿ ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುವುದಿಲ್ಲ
* ಮಗುವಿನ ಜನನದ ದಿನಾಂಕದಿಂದ ಆರು ತಿಂಗಳ ಒಳಗೆ ಅರ್ಜಿ ಸಲ್ಲಿಸಬೇಕು
ಕಾರ್ಮಿಕ ಸಹಾಯವಾಣಿ 155214

Comments are closed.