Puttur: ಇನ್‌ಸ್ಟಾಗ್ರಾಂ ಜಾಹೀರಾತು ನಂಬಿ ಲಕ್ಷಗಟ್ಟಲೆ ಹಣ ಕಳೆದುಕೊಂಡ ಯುವತಿ!

Share the Article

Puttur: ಇನ್‌ಸ್ಟಾಗ್ರಾಂನಲ್ಲಿ ಬಂದ ಜಾಹೀರಾತನ್ನು ನಂಬಿ ಟ್ರೇಡಿಂಗ್‌ ಇನ್‌ವೆಸ್ಟ್‌ಮೆಂಟ್‌ ಮಾಡಿದ ಬನ್ನೂರಿನ ಯುವತಿ 4.09 ಲಕ್ಷ ರೂ. ಕಳೆದುಕೊಂಡಿರುವ ಕುರಿತು ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಕಂಪನಿಯೊಂದರಲ್ಲಿ ಯುವತಿ ಕೆಲಸ ಮಾಡುತ್ತಿದ್ದು, ಮಾ.1 ರಂದು ಇನ್‌ಸ್ಟಾಗ್ರಾಂ ಖಾತೆಯಿಂದ ಟಾಸ್ಕ್‌ ಮಾಡಲು ಯುಪಿಐಐಡಿಗೆ 10 ಸಾವಿರ ರೂ. ಕಳುಹಿಸುವಂತೆ ತಿಳಿಸಿದ್ದು, ಇದನ್ನು ಆಕೆ ಫೋನ್‌ ಪೇ ಮೂಲಕ ಮಾಡಿದ್ದಾರೆ. ನಂತರ ಇದೇ ರೀತಿ ಯುವತಿಗೆ ಮತ್ತೆ 10 ಸಾವಿರ ಹಾಕಿದರೆ 2 ಲಕ್ಷ ರೂ. ಗಳಿಸಬಹುದು ಎಂದು ಸಂದೇಶ ಬಂದಿತ್ತು. ಅನಂತರ ಯುವತಿ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿದ್ದು, ಬರೋಬ್ಬರಿ 4,90,997 ಪಾವತಿ ಮಾಡಿದ್ದರು.

ಆದರೆ ಯುವತಿಯ ಖಾತೆಗೆ ಹಣ ಬಾರದೆ ವಂಚನೆ ಮಾಡಿರುವುದು ಅರಿವಿಗೆ ಬಂದ ನಂತರ ಮಂಗಳೂರು ಸೆನ್‌ ಅಪರಾಧ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದಾರೆ.

Comments are closed.