Bantwal: ನಾಪತ್ತೆಯಾಗಿದ್ದ ದಿಗಂತ್‌ ಪತ್ತೆ ಹಿಂದಿತ್ತು ದೈವದ ಪವಾಡ!

Share the Article

Bantwala: ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್‌ ನಾಪತ್ತೆಯಾಗಿರುವ ಘಟನೆ ರಾಜ್ಯಾದ್ಯಂತ ಸಂಚಲನ ಉಂಟು ಮಾಡಿತ್ತು. ಮಾ.08 ರಂದು ಉಡುಪಿಯ ಡಿಮಾರ್ಟ್‌ನಲ್ಲಿ ದಿಗಂತ್‌ ಪತ್ತೆಯಾಗಿದ್ದಾನೆ.

ದಿಗಂತ್‌ ಪತ್ತೆ ಹಿಂದೆ ದೈವದ ಪವಾಡ ಇದೆ ಎನ್ನಲಾಗಿದೆ. ದಿಗಂತ್‌ ಕುಟುಂಬವು ಅರ್ಕಳ ಉಳ್ಳಾಕುಲು ಮಗೃಂತಾಯ ದೈವದ ಚಾಕರಿ ಮಾಡಿಕೊಂಡು ಬರುತ್ತಿದ್ದು, ನಾಲ್ಕು ತಲೆಮಾರಿನಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದಿಗಂತ್‌ ಸಹೋದರ ರವಿ ದೈವಸ್ಥಾನದಲ್ಲಿ ದೀವಟಿಗೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ರವಿ ಅವರು ನೇಮೋತ್ಸವ ಸಂದರ್ಭದಲ್ಲಿ ತಮ್ಮನಿಗಾಗಿ ಮನಸಲ್ಲೇ ಸಂಕಲ್ಪ ಮಾಡಿದ್ದರು.

ದೈವದ ನೇಮೋತ್ಸವದ ಧ್ವಜ ಕೆಳಗೆ ಇಳಿಯುವುದರ ಒಳಗಾಗಿ ನನ್ನ ತಮ್ಮ ಪತ್ತೆಯಾಗಬೇಕು ಎಂದು ಸಂಕಲ್ಪ ಮಾಡಿದ್ದಾರೆ ಎಂದು ವರದಿಯಾಗಿದೆ. ಊರಿನ ಮಂದಿ ಕೂಡಾ ದೈವದಲ್ಲಿ ಈ ಕುರಿತು ತಿಳಿಸು ಎಂದು ಹೇಳಿದ್ದರು. ಸಹೋದರ ರವಿ ಅವರು ನಾನು ದೈವದಲ್ಲಿ ಪ್ರಶ್ನೆ ಕೇಳುವುದಿಲ್ಲ. ನಮ್ಮ ಸೇವೆಗೆ ದೈವ ದಿಗಂತ್‌ನ ಪತ್ತೆ ಮಾಡಬೇಕು. ನೇಮೋತ್ಸವ ಸಂದರ್ಭ ಏರಿದ ಕೊಡಿ ಇಳಿಯುವುದರೊಳಗೆ ತಮ್ಮ ಬರಬೇಕು ಎಂದು ಹರಕೆ ಹೊತ್ತಿದ್ದರೆಂದು ಮಾಧ್ಯಮವೊಂದು ವರದಿ ಮಾಡಿದೆ.

ರವಿವಾರ ದೈವದ ನೇಮೋತ್ಸವದ ಧ್ವಜಾರೋಹಣ ನಡೆದಿತ್ತು. ಆದರೆ ಶನಿವಾರ ಸಂಜೆ ದಿಗಂತ್‌ ಪತ್ತೆಯಾಗಿದ್ದ. ದೈವ ತನ್ನ ಚಾಕರಿ ಮಾಡುವವರಿಗೆ ಫಲವನ್ನು ನೀಡಿದಂತಾಗಿದೆ. ಈ ಮೂಲಕ ನನ್ನ ತಮ್ಮನನ್ನು ಉಳ್ಳಾಕುಲು ಮಗೃಂತಾಯ ದೈವವೇ ಪತ್ತೆ ಹಚ್ಚಿದೆ ಎಂದು ರವಿ ಹೇಳಿದ್ದಾರೆ ಎಂದು ವರದಿಯಾಗಿದೆ.

Comments are closed.