Telangana Tunnel Tragedy: ತೆಲಂಗಾಣ ಸುರಂಗ ದುರಂತ; 8 ಕಾರ್ಮಿಕರಲ್ಲಿ ಓರ್ವನ ಮೃತದೇಹ ಪತ್ತೆ!

Share the Article

Telangana Tunnel Tragedy: ಫೆಬ್ರವರಿ 22 ರಂದು 8 ಜನ ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದು, ಕಾರ್ಯಾಚರಣೆ ನಡೆಯುತ್ತಿದ್ದರೂ ಇವರ ಸುಳಿವು ಸಿಕ್ಕಿರಲಿಲ್ಲ. ಇಂದು ಕೇಳದಿಂದ ಬಂದ ವಿಶೇಷ ತರಬೇತಿ ಪಡೆದ ಶೋಧನಾ ನಾಯಿಗಳು ಮಣ್ಣಿನಡಿ ಮೃತದೇಹ ಇರುವ ಕುರಿತು ಸೂಚನೆ ನೀಡಿದೆ.

ಸುರಂಗದ ಕೊನೆಯ ಭಾಗದಲ್ಲಿರುವ ಡಿ-2 ಪಾಯಿಂಟ್‌ ಬಳಿ ನಾಯಿಗಳು ಕಾರ್ಮಿಕರು ಇರುವ ಕುರಿತು ಪತೆ ಮಾಡಿದೆ. ಘಟನೆ ನಡೆದ ಸ್ಥಳದಿಂದ ಸುಮಾರು 100 ಮೀಟರ್‌ ದೂರದಲ್ಲಿ ಕಂಡು ಬಂದಿದೆ. ಕೂಡಲೇ ರಕ್ಷಣಾ ಸಿಬ್ಬಂದಿ ಎಚ್ಚರಿಕೆಯಿಂದ ಮಣ್ಣನ್ನು ಅಗೆಯುತ್ತಿದ್ದು, ಈ ಸ್ಥಳದಲ್ಲಿ ಮಣ್ಣಿನಡಿ ಓರ್ವ ಕಾರ್ಮಿಕನ ಮೃತದೇಹ ಪತ್ತೆಯಾಗಿದೆ.

Comments are closed.