Hubballi: ಪುಷ್ಪ ಸ್ಟೈಲ್‌ನಲ್ಲಿ ಬೈಕ್ ಮೇಲೆ ಸ್ಟಂಟ್ ಮಾಡಿದ ಪುಂಡ- ಗರಂ ಆದ ಖಾಕಿ ಪಡೆ!

Hubballi: ನಡುರಸ್ತೆಯ ಮೇಲೆ ಸ್ಟಂಟ್ ಮಾಡುತ್ತಾ ಬೈಕ್‌ನಲ್ಲಿ ಪುಷ್ಪ ಶೈಲಿನಲ್ಲಿ ಫೋಸ್ ಕೊಡುತ್ತಾ ಡ್ರೈವ್ ಮಾಡಿದ ಪುಂಡನಿಗೆ ಪೊಲೀಸರು ಸಖತ್ ಬುದ್ಧಿ ಕಲಿಸಿದ್ದಾರೆ. ಈ ಘಟನೆ ಹುಬ್ಬಳ್ಳಿ-ಗದಗ ರಸ್ತೆಯಲ್ಲಿ ನಡೆದಿದೆ.

ಬಾಡಿದ ಪುಷ್ಪ….
ಪುಷ್ಪಾ ಶೈಲಿಯಲ್ಲಿ ಸ್ಟಂಟ್ ಮಾಡುತ್ತ ಹುಬ್ಬಳ್ಳಿ-ಗದಗ ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ & ನಿರ್ಲಕ್ಷತನದಿಂದ ವಾಹನ ಚಾಲನೆ ಮಾಡುತ್ತಿದ್ದ ಯುವಕನ ವಿರುದ್ಧ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಾಹನ ಸೀಜ್ ಮಾಡಿ ಕಾನೂನು ಕ್ರಮ ಜರುಗಿಸಲಾಗಿದೆ. pic.twitter.com/0RVM4VvcNW
— HUBBALLI DHARWAD CITY POLICE (@compolhdc) March 8, 2025
ಬೈಕ್ ಮೇಲೆ ಪುಂಡನೋರ್ವ ಸ್ಟಂಟ್ ಮಾಡುತ್ತಾ ವೀಡಿಯೋ ರೆಕಾರ್ಡ್ ಮಾಡುತ್ತಾ, ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡಿದ್ದ. ಈ ಸುದ್ದಿ ಪೊಲೀಸರಿಗೆ ತಲುಪಿದೆ. ಕೂಡಲೇ ಪೊಲೀಸರು ಪುಂಡನಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಹಾಗೂ ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ. ಯುವಕನ ವಿರುದ್ಧ ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿ ವಾಹನ ಸೀಜ್ ಮಾಡಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.