Champions Trophy Final: ಇಂದು ಇಂಡಿಯಾ-ನ್ಯೂಜಿಲೆಂಡ್‌ ನಡುವೆ ಫೈನಲ್‌

Share the Article

Champions Trophy Final: ಐಸಿಸಿ ಚಾಂಪಿಯನ್ಸ್‌ ಟ್ರೋಫಿ-2025 ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ ಫೈನಲ್‌ ಪಂದ್ಯ ಇಂದು ದುಬೈ ಅಂತರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿದೆ. ಐಸಿಸಿ ಟೂರ್ನಿಗಳಲ್ಲಿ ಸುತ್ತಿನಲ್ಲಿ ಕಿವೀಸ್‌ ವಿರುದ್ಧ ಭಾರತ ಇಲ್ಲಿಯವರೆಗೂ ಗೆದ್ದಿಲ್ಲ ಎಂದು ಹೇಳಲಾಗುತ್ತಿದೆ.

ಪ್ರಮುಖ ವೇಗಿ ಮ್ಯಾಟ್‌ ಹೆನ್ರಿ ಭುಜದ ನೋವಿನಿಂದಾಗಿ ಇಂದು ಫೈನಲ್‌ನಲ್ಲಿ ಆಡುವುದು ಅನುಮಾನ ಉಂಟಾಗಿರುವ ಕಾರಣ ಇದು ನ್ಯೂಜಿಲೆಂಡ್‌ ತಂಡಕ್ಕೆ ದೊಡ್ಡ ಆಘಾತ ಉಂಟು ಮಾಡಿದೆ ಎನ್ನಬಹುದು. ಇನ್ನು ಉಳಿದ ಹಾಗೆ ಭಾರತ ತಂಡದಲ್ಲಿ ಬ್ಯಾಟಿಂಗ್‌ನಲ್ಲಿ ಪ್ರಮುಖರು ಲಯ ಕಂಡುಕೊಳ್ಳದೆ ಇರುವುದು ಸಮಸ್ಯೆ ಆಗಿದೆ.

ಭಾರತ ಇಂದು ಗೆದ್ದರೆ ಸತತ ಎರಡು ಐಸಿಸಿ ಟೂರ್ನಿಗಳನ್ನು ಗೆದ್ದ ಹಾಗೆ ಆಗುತ್ತದೆ. 2011 ರಲ್ಲಿ ವಿಶ್ವಕಪ್‌, 2013ರಲ್ಲಿ ಭಾರತ ಚಾಂಪಿಯನ್ಸ್‌ ಟ್ರೋಫಿ ಗೆದ್ದಿತ್ತು.

ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲೀಪ್ ಯಾದವ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರಿಷಭ್ ಪಂತ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.

ನ್ಯೂಜಿಲೆಂಡ್ ತಂಡ

ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೆ (ವಿಕೆಟ್ ಕೀಪರ್, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲಾಥಮ್ (ವಿಕೆಟ್ ಕೀಪರ್), ಡ್ಯಾರಿಲ್ ಮಿಚೆಲ್, ವಿಲ್ ಒರೂರ್ಕ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಬೆನ್ ಸಿಯರ್ಸ್, ನಾಥನ್ ಸ್ಮಿತ್, ಕೇನ್ ವಿಲಿಯಮ್ಪನ್, ವಿಲ್ ಯಂಗ್.

ಪಂದ್ಯ: ಮಧ್ಯಾಹ್ನ 2.30 ಕ್ಕೆ ನೇರಪ್ರಸಾರ- ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌ನಲ್ಲಿ.

Comments are closed.