Shira: ಲಸಿಕೆ ಹಾಕಿಸಿಕೊಂಡ ಕೆಲವೇ ಗಂಟೆಯಲ್ಲಿ ಮಗು ಸಾವು!

Shira ತಾಲೂಕಿನ ಮಾಗೋಡು ಗ್ರಾಮದಲ್ಲಿ ರೋಟ್ – 2 ಲಸಿಕೆ ಹಾಕಿಸಿಕೊಂಡಿದ್ದ ಮಗು ಮೃತ ಪಟ್ಟಿದ್ದು ಮಗು ಸಾವಿಗೆ ಲಸಿಕೆಯೇ ಕಾರಣ ಎಂದು ಪೋಷಕರು ಆರೋಪಿಸಿ ದೂರು ದಾಖಲಿಸಿದ್ದಾರೆ.

ಗ್ರಾಮದ ಕೀರ್ತನ ಹಾಗೂ ಲಕ್ಷ್ಮೀಕಾಂತ್ ದಂಪತಿಗಳ ಐದು ತಿಂಗಳ ಮಗುವಿಗೆ ಅದೇ ಗ್ರಾಮದ ಎಎನ್‌ಎಂ ಮುದ್ದಮ್ಮ ಎಂಬುವವರು ಮಾ.6 ರಂದು ಬೆಳಗ್ಗೆ 11.30ರ ಸುಮಾರಿಗೆ ರೋಟ್ – 2 ಲಸಿಕೆ ಹಾಕಿದ್ದರು. ಲಸಿಕೆಯ ಬಳಿಕ ಮಲಗಿದ ಮಗು ಸಂಜೆ 3.30ರ ಹೊತ್ತಿಗೆ ಬೇಧಿಯಿಂದ ಅಸ್ವಸ್ಥಗೊಂಡಿದೆ.
ಕೂಡಲೇ ಪೋಷಕರು ಮಗುವನ್ನು ಶಿರಾ ಸರಕಾರಿ ಆಸತ್ರೆಗೆ ಕರೆದೊಯ್ದಿದ್ದು, ಈ ವೇಳೆ ವೈದ್ಯರು ತುಮಕೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ನಂತರ ಅಲ್ಲಿಂದ ಶ್ರೀದೇವಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಮಗುವನ್ನು ಪರಿಶೀಲಿಸಿದ ವೈದ್ಯರು ಮಗು ಮೃತಪಟ್ಟು ಒಂದು ಗಂಟೆಯಾಗಿದೆ ಎಂದು ತಿಳಿಸಿದ್ದಾರೆ. ಮಗು ಮೃತಪಡಲು ಲಸಿಕೆಯೇ ಕಾರಣ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದು, ಈ ಸಂಬಂಧ ಶಿರಾ ನಗರ ಪೊಲೀಸ್ ಠಾಣೆ ದೂರು ದಾಖಲಿಸಿದ್ದಾರೆ.
Comments are closed.