Karnataka Budget 2025-26: ʼಮದ್ಯʼ ಪ್ರಿಯರಿಗೆ ಬಿಗ್‌ಶಾಕ್‌

ಗೃಹಲಕ್ಷ್ಮೀ ಯೋಜನೆ ಅಕ್ಕ ಕೋ ಆಪರೇಟಿವ್‌ ಸೊಸೈಟಿ ವ್ಯಾಪ್ತಿಗೆ

Share the Article

Karnataka Budget 2025-26: ಸಿಎಂ ಸಿದ್ದರಾಮಯ್ಯ ಅವರು ಇಂದು ಶುಕ್ರವಾರ 2025-26 ನೇ ಸಾಲಿನ 16ನೇ ಬಜೆಟ್‌ ಮಂಡನೆ ಮಾಡುತ್ತಿದ್ದು, ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್‌ ಮಂಡನೆ ನಡೆಯುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಸಾಕಷ್ಟು ನಿರೀಕ್ಷೆಗಳು ಇದೆ.

ಮದ್ಯ ಪ್ರಿಯರಿಗೆ ಬಿಗ್‌ ಶಾಕ್‌ ನ್ಯೂಸ್‌ ಇದೆ. ರಾಜ್ಯದಲ್ಲಿ ಮದ್ಯದ ದರ ಮತ್ತಷ್ಟು ಏರಿಕೆಯಾಗಲಿದೆ. ಸರಕಾರ ಅಬಕಾರಿ ಇಲಾಖೆಗೆ 36,500 ಕೋಟಿ ರೂ. ಆದಾಯದ ಟಾರ್ಗೆಟ್‌ ನೀಡಿದ್ದು, ಈ ಮೂಲಕ ರಾಜ್ಯದಲ್ಲಿ ಮದ್ಯದ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ರಾಜ್ಯ ಸರಕಾರ ಅಬಕಾರಿ ಸ್ಲ್ಯಾಬ್‌ ಪರಿಷ್ಕರಣೆಗೆ ನಿರ್ಧಾರ ಮಾಡಿದೆ. ಈ ಕುರಿತು ಸಿಎಂ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.

ರಾಜ್ಯ ಮಟ್ಟದಲ್ಲಿ ಅಕ್ಕ ಕೋ-ಅಪರೇಟಿವ್‌ ಸೊಸೈಟಿ ಸ್ಥಾಪಿಸಲು ನಿರ್ಧರಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳನ್ನು ಈ ಸೊಸೈಟಿ ಅಡಿಗೆ ತರಲು ನಿರ್ಧಾರ ಮಾಡಲಾಗಿದೆ ಎಂದರು.

Comments are closed.