Ration Card: ಹೊಸ ರೇಷನ್ ಕಾರ್ಡ್ ಸದ್ಯಕ್ಕಿಲ್ಲ- ಕೆ.ಹೆಚ್. ಮುನಿಯಪ್ಪ

Ration Card: ಹೊಸ ರೇಷನ್ ಕಾರ್ಡ್ ಪಡೆಯುವ ಕುರಿತು ಆಹಾರ ಇಲಾಖೆ ಮಾಹಿತಿಯೊಂದನ್ನು ಹಂಚಿಕೊಂಡಿದೆ. ಸರಕಾರದಿಂದ ಸದ್ಯಕ್ಕೆ ಹೊಸ ರೇಷನ್ ಕಾರ್ಡ್ ಹಂಚಿಕೆ ಇಲ್ಲ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೇಂದ್ರ ನಿಗದಿ ಮಾಡಿದ್ದ ರೇಷನ್ ಕಾರ್ಡ್ ನಿಗದಿ ಗುರಿ ಮುಕ್ತಾಯಗೊಂಡಿದೆ. ಹೊಸ ಕಾರ್ಡ್ ಕೊಡಲು ಅವಕಾಶವಿಲ್ಲ, ಅನರ್ಹರ ಕಾರ್ಡ್ ರದ್ದು ಮಾಡುವವರೆಗೂ ಹೊಸ ಕಾರ್ಡ್‌ಗಳನ್ನು ಕೊಡಲಾಗುವುದಿಲ್ಲ ಎಂದು ವಿಧಾನಸಭೆಯಲ್ಲಿ ಸಚಿವರು ಹೇಳಿದ್ದಾರೆ.
ಹೊಸ ಅರ್ಜಿ ಹಾಕಿರುವ ಜನರು ಬಿಪಿಎಲ್ ಕಾರ್ಡ್‌ಗಳಿಗಾಗಿ ಇನ್ನು ಕಾಯಬೇಕು. ಸದ್ಯಕ್ಕೆ ಹೊಸ ರೇಷನ್ ಕಾರ್ಡ್ ಕೊಡಲು ಸರಕಾರದಲ್ಲಿ ಅವಕಾಶವಿಲ್ಲ . ಕೇಂದ್ರ ಸರಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಅನ್ವಯ 4,01,93,000 ಫಲಾನುಭವಿಗಳಿಗೆ ಮಾತ್ರ ಪಡಿತರ ವಿತರಣೆ ಮಾಡಲು ಗುರಿ ಮಾಡಲಾಗಿದೆ ಎಂದು ಅವರು ಹೇಳಿದರು.
Comments are closed.