Home News Sharan Pampwel: ನೆಲ್ಲಿದಡಿ‌ಗುತ್ತು ದೈವದ ಆಚರಣೆ ಅಡ್ಡಿ‌ ವಿಚಾರ- ಶರಣ್ ಪಂಪವೆಲ್ ನಿಂದ ಮಹತ್ವದ...

Sharan Pampwel: ನೆಲ್ಲಿದಡಿ‌ಗುತ್ತು ದೈವದ ಆಚರಣೆ ಅಡ್ಡಿ‌ ವಿಚಾರ- ಶರಣ್ ಪಂಪವೆಲ್ ನಿಂದ ಮಹತ್ವದ ಹೇಳಿಕೆ

Hindu neighbor gifts plot of land

Hindu neighbour gifts land to Muslim journalist

Sharan Pampwel : ಬಜಪೆ ಗ್ರಾಮದ ನೆಲ್ಲಿದಡಿಗುತ್ತಿನ ದೈವ ಕಾಂತೇರಿ ಜುಮಾದಿ ಸ್ಥಾನಕ್ಕೆ ತೆರಳಿ ನಿತ್ಯ ಆರಾಧನೆಗೆ ಮುಂದಿನ ದಿನಗಳಿಂದ ಅವಕಾಶವನ್ನು ನಿರಾಕರಿಸುವ ಮೂಲಕ ಮಂಗಳೂರು ಎಸ್‌ಇಝೆಡ್‌ ಕಂಪನಿ ತುಳುನಾಡಿನ ಆಸ್ಮಿತೆ, ನಂಬಿಕೆ ಮೇಲೆ ಸವಾರಿ ಮಾಡಲು ಹೊರಟಂತ ಪ್ರಕರಣ ಕರಾವಳಿ ಭಾಗದಲ್ಲಿ ಬಾರಿ ಸದ್ದು ಮಾಡಿತ್ತು. ಜನಗಳ ನಂಬಿಕೆಗೆ ಸರ್ಕಾರಿ ಸ್ವಾಮ್ಯದ ಕಂಪನಿ ಅಡ್ಡಿ ಮಾಡುತ್ತದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಶರಣ್ ಪಂಪವೆಲ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶರಣ್ ಪಂಪ್ ವೆಲ್ ಅವರು ಎಸ್‌ಇಝಡ್ ನಡಿ ಇರುವ ನೆಲ್ಲಿದಡಿ ಗುತ್ತು ದೈವಸ್ಥಾನ ಜಾಗ. ಆ ಕುಟುಂಬದ ಆರಾಧನೆಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು. ಆ ದೇವಸ್ಥಾನದ ಐದುವರೆ ಎಕರೆ ಭೂಮಿ ಕುಟುಂಬಕ್ಕೆ ನೀಡಬೇಕು ಎಂದಿದ್ದರೆ.

ಅಲ್ಲದೆ ಕೇಂದ್ರ ಸರ್ಕಾರಕ್ಕೆ ಇದಕ್ಕೆ ಸಂಬಂಧಪಟ್ಟವರಿಗೆ ಮನವಿ ಮಾಡ್ತೇವೆ. ನೆಲ್ಲಿದಡಿ ಗುತ್ತು ಹೋರಾಟ ಸಮಿತಿಯೊಂದಿಗೆ ವಿಎಚ್ಫಿ ಎಂದೂ ಇರುತ್ತೆ. ಮುಂದಿನ ಹೋರಾಟದಲ್ಲಿ ನೆಲ್ಲಿದಡಿ ಗುತ್ತಿವಿನ ಹೋರಾಟ ಸಮಿತಿಯೊಂದಿಗೆ ವಿಎಚ್ಪಿ ಇರಲಿದೆ. ಈ ಕುರಿತು ಎಸ್‌ಇಝಡ್ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಲಿ. ಅದು ಬಿಟ್ಟು ಸಂಘರ್ಷಕ್ಕೆ ಅವಕಾಶ ಮಾಡಿ ಕೊಡಬೇಡಿ. ತುಳುವರ ಮೂಲ ಶಕ್ತಿಯಾಗಿದೆ ದೈವಾರಾಧನೆ. ತುಳುವರ ನಂಬಿಕೆಗೆ ನೋವು‌ ಉಂಟು ಮಾಡಿದ್ರೆ ತುಳುನಾಡಿನ ಜನತೆ ಸುಮ್ಮನಿರಲ್ಲ ಎಂದು ಶರಣ್ ಪಂಪವೆಲ್ಲ್ ಹೇಳಿಕೆ ನೀಡಿದ್ದಾರೆ