Home News Actress Ranya Rao: ನಟಿ ರನ್ಯಾ ರಾವ್‌ ಜೈಲುಪಾಲು; 14 ದಿನ ನ್ಯಾಯಾಂಗ ಬಂಧನ!

Actress Ranya Rao: ನಟಿ ರನ್ಯಾ ರಾವ್‌ ಜೈಲುಪಾಲು; 14 ದಿನ ನ್ಯಾಯಾಂಗ ಬಂಧನ!

Hindu neighbor gifts plot of land

Hindu neighbour gifts land to Muslim journalist

Actress Ranya Rao: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ನಟಿ ಜೈಲುಪಾಲಾಗಿದ್ದು, ಮಾರ್ಚ್‌ 18 ರವರೆಗೆ ರನ್ಯಾ ರಾವ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್‌ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಆರೋಪಿ ರನ್ಯಾ ರಾವ್‌ ಅವರ ಬಂಧನವಾಗಿದ್ದು, ಡಿ.ಆರ್‌.ಐ ಅಧಿಕಾರಿಗಳು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ 14 ದಿನಗಳ ಕಾಲ ನ್ಯಾಯಾಂಗ ಬಂಧನ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. 14.8 ಕೆಜಿ ಚಿನ್ನ ರನ್ಯಾರಾವ್‌ ಬಳಿ ದೊರಕಿರುವ ಮಾಹಿತಿ ಇದ್ದು, ರಾಜ್ಯದ ಇತಿಹಾಸದಲ್ಲೇ ಇದು ಅತಿ ದೊಡ್ಡ ಚಿನ್ನದ ಅಕ್ರಮ ಸಾಗಣೆ ಪ್ರಕರಣ ಎನ್ನಲಾಗಿದೆ.

 

ರನ್ಯಾ ರಾವ್‌ ಡಿಜಿಪಿ ಡಾ.ಕೆ. ರಾಮಚಂದ್ರರಾವ್‌ ಅವರ ಮಲಮಗಳು.

ನಟಿ ರನ್ಯಾ ರಾವ್‌ ಫ್ಲಾಟ್‌ ಮೇಲೆ ನಿನ್ನೆ ರಾತ್ರಿ ಡಿಆರ್‌ಐ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲೂ ಕೋಟಿ ಕೋಟಿ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಲಾವೆಲ್ಲಿ ರಸ್ತೆಯ ಮನೆಯಲ್ಲಿ 2.06 ಕೋಟಿ ಮೌಲ್ಯದ ಚಿನ್ನ ವಶಪಡಿಸಲಾಗಿದೆ.

ನಂದವಾಣಿ ಮ್ಯಾನ್ಸನ್‌ನಲ್ಲಿ ನಟಿ ವಾಸವಿದ್ದು, ತಿಂಗಳಿಗೆ 4.5 ಲಕ್ಷ ಬಾಡಿಗೆ ಕಟ್ಟುತ್ತಿದ್ದರು.