UP: ಪಾನ್ ಮಸಾಲಾ ಜಗಿದು ವಿಧಾನಸಭಾ ಬಾಗಿಲಿಗೆ ಉಗುಳಿದ ಶಾಸಕ !! ಸ್ಪೀಕರ್ ಕೆಂಡಮಂಡಲ

Share the Article

UP: ಶಾಸಕರು ಒಬ್ಬರು ಪಾನ್ ಮಸಾಲ ಜಗಿದು ವಿಧಾನಸಭೆಯ ಬಾಗಿಲಲ್ಲೇ ಉಗುಳಿದಂತಹ ಅಸಹ್ಯಕರ ಘಟನೆಯೊಂದು ನಡೆದಿದೆ.

ಹೌದು, ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಈ ರೀತಿಯ ವಿಚಿತ್ರ ಪ್ರಸಂಗವೊಂದು ನಡೆದಿದ್ದು, ಕೆಲ ಸದಸ್ಯರು ಪಾನ್‌ ಮಸಾಲ ಜಗಿದು ಬಳಿಕ ವಿಧಾನಸಭೆಯ ಸಭಾಂಗಣದಲ್ಲೇ ಉಗುಳಿದ್ದಾರೆ. ಈ ವಿಚಾರವನ್ನು ಸ್ಪೀಕರ್‌ ಸತೀಶ್‌ ಮಹಾನಾ ಅವರು ಪ್ರಸ್ತಾಪಿಸಿ ವಿಷಾದ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಪಾನ್‌ ಜಗಿದು ಉಗುಳಿದ ಶಾಸಕರನ್ನು ನಾನು ವಿಡಿಯೋನಲ್ಲಿ ನೋಡಿದ್ದೇನೆ. ಆದರೆ ಯಾರನ್ನೂ ಅವಮಾನಿಸಲು ಬಯಸುವುದಿಲ್ಲ, ಹೀಗಾಗಿ ನಾನು ಅವರ ಹೆಸರನ್ನೂ ಪ್ರಸ್ತಾಪಿಸುವುದಿಲ್ಲ. ಇನ್ಮುಂದೆ ಯಾರಾದ್ರೂ ಈ ರೀತಿ ಮಾಡುವುದು ಕಂಡರೆ ಅದನ್ನು ತಡೆಯಬೇಕು. ತಪ್ಪು ಮಾಡಿರುವ ಶಾಸಕರು ಅವರಾಗಿಯೇ ಈ ತಪ್ಪು ಮಾಡಿದ್ದಾರೆಂದು ಹೇಳಿದ್ರೆ ಒಳ್ಳೆಯದು, ಇಲ್ಲದಿದ್ದರೆ ನಾನೇ ಅವರನ್ನು ಕರೆಯುತ್ತೇನೆ ಎಂದು ಎಚ್ಚರಿಕೆ ಕೂಡ ನೀಡಿದರು.

Comments are closed.