Puttur: ಪುತ್ತೂರು: ಆಟೋ ರಿಕ್ಷಾ ಚಾಲಕ ಆತ್ಮಹತ್ಯೆ

Share the Article

Puttur: ಆಟೋ ರಿಕ್ಷಾ ಚಾಲಕ ಪೆರಿಯತ್ತೋಡಿ (Puttur) ದಿ.ಹುಕ್ರಪ್ಪ ಗೌಡ ಅವರ ಪುತ್ರ ಕೃಷ್ಣ(40)ರವರು ಮನೆಯ ಬಳಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.3ರಂದು ನಡೆದಿದೆ.

ಬೆಳಿಗ್ಗೆ ಅವರು ರಿಕ್ಷಾದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ದಿದ್ದರು. ಮಧ್ಯಾಹ್ನದ ವೇಳೆ ಅವರಿಗೆ ಸಾಲ ವಸೂಲಿಗಾರರ ಕರೆ ಬಂದಿತ್ತು. ಅದಾದ ಬಳಿಕ ಅವರು ಮನೆಯ ಬಳಿಯ ಮರವೊಂದರ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ಸಹೋದರರಾದ ಕುಶಾಲಪ್ಪ, ರಿಕ್ಷಾ ಚಾಲಕ ಶಿವರಾಮ, ಹರೀಶ್ ಮತ್ತು ಮೂವರು ಸಹೋದರಿಯರನ್ನು ಅಗಲಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.