Dharmasthala: ಧರ್ಮಸ್ಥಳ: ಒಂದೇ ದಿನದ ಜ್ವರದಿಂದ ಎರಡು ವರ್ಷದ ಮಗು ಮೃತ್ಯು!

Dharmasthala: ನೇತ್ರಾವತಿ (Dharmasthala) ಅಜಿಕುರಿ ನಿವಾಸಿ, ಸಿವಿಲ್ ಗುತ್ತಿಗೆದಾರರಾಗಿದ್ದ ದಿ. ಯಾಕೂಬ್ ಅವರ ಪುತ್ರ ಹೈದರ್ ಅಲಿ ಮತ್ತು ಮುಹ್ರೂಫಾ ದಂಪತಿಗಳ ಪುತ್ರ ಮುಹಮ್ಮದ್ ಅಭಿಯಾನ್( 2) ಅವರು ಒಂದೇ ದಿನದ ಜ್ವರದಿಂದ ಬಳಲಿ ಸೌದಿ ಅರೇಬಿಯಾದ ಬುರೈದಾದಲ್ಲಿ ಮಾ.2 ರಂದು ನಿಧನರಾಗಿದ್ದಾರೆ.

ಮುಹಮ್ಮದ್ ಅಭಿಯಾನ್ಗೆ ಕೇವಲ ಒಂದು ದಿನದ ಮಟ್ಟಿಗೆ ಜ್ವರ ಕಾಣಿಸಿಕೊಂಡಿತ್ತು. ತಕ್ಷಣವೇ ಮನೆಯವರು ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಮತ್ತೆ ಜ್ವರ ಉಲ್ಬಣಿಸಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆಯೇ ಮಗು ಮೃತ ಪಟ್ಟಿದೆ ಎಂದು ತಿಳಿದುಬಂದಿದೆ.
ಮೃತ ಮಗುವಿನ ಅಂತ್ಯಸಂಸ್ಕಾರ ಸೌದಿ ಕಾನೂನು ಪ್ರಕ್ರಿಯೆ ನಡೆದ ಬಳಿಕ ಸೌದಿ ಅರೇಬಿಯಾದಲ್ಲೇ ಮಾ.4 ರಂದು ಭಾರತೀಯ ಕಾಲಮಾನದಂತೆ ಮಧ್ಯಾಹ್ನದ ಒಳಗೆ ನಡೆಯಲಿದೆ ಎಂದು ಮಗುವಿನ ದೊಡ್ಡಪ್ಪ ಅಜಿಕುರಿ ಶರೀಫ್ ಸಖಾಫಿ ತಿಳಿಸಿದ್ದಾರೆ.
Comments are closed.