Home News Ration: ರೇಷನ್‌; ಮಾರ್ಚ್‌ನಿಂದ ನಗದು ಸ್ಥಗಿತ, 10 ಕೆಜಿ ಅಕ್ಕಿ ಪೂರೈಕೆ- ಆಹಾರ ಸಚಿವ

Ration: ರೇಷನ್‌; ಮಾರ್ಚ್‌ನಿಂದ ನಗದು ಸ್ಥಗಿತ, 10 ಕೆಜಿ ಅಕ್ಕಿ ಪೂರೈಕೆ- ಆಹಾರ ಸಚಿವ

KH Muniyappa

Hindu neighbor gifts plot of land

Hindu neighbour gifts land to Muslim journalist

Shivamogga: ಗ್ಯಾರಂಟಿ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ನೀಡಲಾಗುತ್ತಿದ್ದ ನಗದು ಬದಲು ಫೆಬ್ರವರಿ ತಿಂಗಳಿನಿಂದ ವಿತರಣೆ ಮಾಡಬೇಕಾಗಿದ್ದ ಅಕ್ಕಿಯನ್ನು ಸೇರಿಸಿ ಮಾರ್ಚ್‌ ತಿಂಗಳಲ್ಲಿ ಬಡವರಿಗೆ 10 ಕೆಜಿ ಅಕ್ಕಿ ನೀಡಲಾಗುವುದು. ಬಿಜೆಪಿ ಸರಕಾರದ ಆಡಳಿತದಲ್ಲಿ 2.95 ಲಕ್ಷ ಬಿಪಿಎಲ್‌ ಕಾರ್ಡ್‌ ಚಲಾಯವಣೆಯಲ್ಲಿತ್ತು. ನಮ್ಮ ಸರಕಾರದಲ್ಲಿ 1.65 ಲಕ್ಷ ಕಾರ್ಡ್‌ಗಳನ್ನು ಬಿಪಿಎಲ್‌ಗೆ ಹಾಗೂ ಉಳಿದ ಕಾರ್ಡ್‌ಗಳನ್ನು ಎಪಿಎಲ್‌ಗೆ ಸೇರಿಸಲಾಗಿರುವ ಕುರಿತು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದ್ದಾರೆ.

ಕೇಂದ್ರ ಸರಕಾರ ಅಕ್ಕಿ ಕೊಡಲು ಒಪ್ಪಿಗೆ ನೀಡಿದೆ. ಈ ಮೂಲಕ ಫೆಬ್ರವರಿಯಿಂದ ವಿತರಿಸಬೇಕಿದ್ದ ಅಕ್ಕಿಯನ್ನು ಸೇರಿಸಿ ಮಾರ್ಚ್‌ನಲ್ಲಿ ಬಡವರಿಗೆ ನೀಡಲಾಗುವುದು. ಆರ್ಥಿಕವಾಗಿ ಸ್ಥಿತಿವಂತರು ಹೊಂದಿರುವ ಬಿಪಿಎಲ್‌ ಕಾರ್ಡ್‌ಗಳನ್ನು ಪತ್ತೆ ಮಾಡಲಾಗುವುದು. ಅವುಗಳನ್ನು ಎಪಿಎಲ್‌ ಕಾರ್ಡ್‌ಗಳನ್ನಾಗಿ ಪರಿವರ್ತನೆ ಮಾಡಲಾಗುವುದು. 2023 ರ ಜುಲೈನಿಂದ ಫಲಾನುಭವಿಗಳ ಖಾತೆಗೆ ಹಣ ಜಮೆ ಪ್ರಕ್ರಿಯೆ ನಡೆದಿತ್ತು. ಇದೀಗ ಅಕ್ಕಿ ಪೂರೈಸಲು ನಿರ್ಧಾರ ಮಾಡಲಾಗಿದೆ ಎಂದರು.