Karnataka Government : ಕಾರ್ಮಿಕರ ಮದುವೆಗೆ 60,000 ಸಹಾಯಧನ ಘೋಷಿಸಿದ ಸರ್ಕಾರ – ಹೀಗೆ ಅರ್ಜಿ ಸಲ್ಲಿಸಿ

Share the Article

Karnataka Government : ರಾಜ್ಯದ ಕಾರ್ಮಿಕರಿಗೆ ಸರ್ಕಾರ ಭರ್ಜರಿ ಗುಡ್ ನ್ಯೂಸ್ ಅಂದನು ನೀಡಿದ್ದು ಕಾರ್ಮಿಕರ ಮದುವೆಗೆ 60,000 ಸಹಾಯಧನ ನೀಡುವುದಾಗಿ ಘೋಷಣೆ ಮಾಡಿದೆ.

ಹೌದು, ನೋಂದಾಯಿತ ಕಾರ್ಮಿಕರ ಮದುವೆ ಅಥವಾ ಕಾರ್ಮಿಕರ ಮಕ್ಕಳ ಮದುವೆಗೆ ಮಂಡಳಿಯಿಂದ ಸಹಾಯಧನ ಪಡೆಯಬಹುದಾಗಿ ಸರ್ಕಾರ ತಿಳಿಸಿದೆ. ಇದು ಫಲಾನುಭವಿ ಮತ್ತು ಅವರ ಮಕ್ಕಳಿಗೂ ಕೂಡ ಅನ್ವಯವಾಗುತ್ತದೆ. ಹೀಗಾಗಿ ಅರ್ಜಿ ಹಾಕುವ ಮೂಲಕ 60,000 ಸಹಾಯಧನವನ್ನು ಪಡೆಯಬಹುದಾಗಿದೆ.

ಹೀಗೆ ಅರ್ಜಿ ಸಲ್ಲಿಸಿ
1) ಮೊದಲು https://karbwwb.karnataka.gov.in/kn ಗೆ ಭೇಟಿ ನೀಡಿ
2) ನೀವು ಕಡ್ಡಾಯವಾಗಿ ಲಾಗಿನ್ ಆಗಬೇಕು
3) ನೀವು ಮತ್ತೊಮ್ಮೆ Registration ಮೇಲೆ ಕ್ಲಿಕ್ ಮಾಡಿ ಪೂರ್ಣಗೊಳಿಸಿ
4) ನಂತರ ಅಲ್ಲಿ Schemes ಯೋಜನೆಗಳು ಮೇಲೆ ಕ್ಲಿಕ್ ಮಾಡಿ
5) ನಂತರ ಅಲ್ಲಿ ಮದುವೆ ಸಹಾಯಧನ ಮೇಲೆ ಕ್ಲಿಕ್ ಮಾಡಿ
6) ನಂತರ ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ದಾಖಲಾತಿಗಳನ್ನು ಅಪ್ ಲೋಡ್ ಮಾಡಿ
7) ಕೊನೆಗೆ submit ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ

ಏನೆಲ್ಲಾ ದಾಖಲೆಗಳು ಬೇಕು..?
1) ಆಧಾರ್ ಕಾರ್ಡ್
2) ಬ್ಯಾಂಕ್ ವಿವರಗಳು
3) ಮ್ಯಾರೇಜ್ ಸರ್ಟಿಫಿಕೇಟ್
4) ಮದುವೆ ಕರ್ನಾಟದ ಹೊರಗೆ ನಡೆದಿದ್ದಲ್ಲಿ ಅಫಿಡವಿಟ್ ಸಲ್ಲಿಸುವುದು

Comments are closed.