Gruha Jyothi ಯೋಜನೆಯಲ್ಲಿ ಬದಲಾವಣೆ – ಇನ್ನು ಮುಂದೆ ಗ್ರಾಹಕರಿಗೆ ಸಿಗೋದು ಬರೀ ‘ಅರ್ಧ ಜ್ಯೋತಿ’

Share the Article

Gruha jyoti: ರಾಜ್ಯ ಸರ್ಕಾರ ತಾನು ಅಧಿಕಾರಕ್ಕೆ ಬರುವ ಹೊತ್ತಿನಲ್ಲಿ, ಚುನಾವಣಾ ಪೂರ್ವದಲ್ಲಿ ಪಂಚ ಗ್ಯಾರೆಂಟಿಗಳನ್ನು ಘೋಷಣೆ ಮಾಡಿತ್ತು. ಅಂತಗೆ ತಾನು ಮಾತು ಕೊಟ್ಟಂತೆ ಅಧಿಕಾರದ ಚುಕ್ಕಾಣಿ ಹಿಡಿದಾಗ ಅಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು. ಅದರಲ್ಲಿ ‘ಗೃಹಜ್ಯೋತಿ’ ಯೋಜನೆ ಕೂಡ ಪ್ರಮುಖವಾದದ್ದು. ಈ ಯೋಜನೆಯಡಿ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ತನ್ನು ನೀಡಲು ಸರ್ಕಾರ ತೀರ್ಮಾನಿಸಿತ್ತು. ಅಂತೆಯೇ ಇದುವರೆಗೂ ಕೂಡ ನಡೆದುಕೊಂಡು ಬರುತ್ತಿದೆ. ಆದರೆ ಈಗ ಈ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲು ಸರ್ಕಾರ ಚಿಂತನೆ ನಡೆಸಿದೆ.

ಹೌದು, ಹೊಸ ವಿದ್ಯುತ್ ಸಂಪರ್ಕವನ್ನು ಪಡೆದ ಗ್ರಾಹಕರಿಗೆ ಇನ್ನು ಮುಂದೆ ಅರ್ಧ ಜ್ಯೋತಿ ಭಾಗ್ಯವನ್ನು ನೀಡಲು ಸರ್ಕಾರಕ್ಕೆ ಚಿಂತಿಸಿದೆ. ಹೊಸ ಸಂಪರ್ಕ ಪಡೆದ ಗ್ರಾಹಕರಿಗೆ ‘ಬಳಕೆ ಇತಿಹಾಸ’ ಇಲ್ಲದೇ ಇರುವುದರಿಂದ ಅಂತಹ ಬಳಕೆದಾರರು, ರಾಜ್ಯದ ಒಟ್ಟು ಗ್ರಾಹಕರು ಬಳಕೆ ಮಾಡುತ್ತಿದ್ದ ವಿದ್ಯುತ್‌ ಪ್ರಮಾಣದ ಸರಾಸರಿ ಲೆಕ್ಕ ಹಾಕಿ, ತಿಂಗಳಿಗೆ ಗರಿಷ್ಠ 53 ಯೂನಿಟ್‌ ಮತ್ತು ಅದಕ್ಕೆ ಶೇ 10ರಷ್ಟು ಹೆಚ್ಚುವರಿ ಸೇರಿ ಒಟ್ಟು 58 ಯೂನಿಟ್‌ ‘ಉಚಿತ ವಿದ್ಯುತ್‌’ ಯೋಜನೆಯ ಸೌಲಭ್ಯ ಪಡೆಯಲು ಅವಕಾಶವಿದೆ. ಅಂದರೆ, 58 ಯೂನಿಟ್‌ ಮೀರಿ, 200 ಯೂನಿಟ್‌ ಬಳಕೆಯ ಮಿತಿಯ ಒಳಗೆ ವಿದ್ಯುತ್‌ ಬಳಕೆ ಮಾಡುತ್ತಿದ್ದರೂ, ಬಳಸಲಾದ ಹೆಚ್ಚುವರಿ ಯೂನಿಟ್‌ನ ಶುಲ್ಕವನ್ನು ಪಾವತಿಸಲೇಬೇಕಿದೆ.

ಇನ್ನು ‘ಆರ್ಥಿಕ ವರ್ಷದ ವಿದ್ಯುತ್‌ ಬಳಕೆ ಆಧಾರದಲ್ಲಿ ಪ್ರತಿ ವರ್ಷ ಸರಾಸರಿ ಯೂನಿಟ್‌ ಬಳಕೆಯನ್ನು ನಿರ್ಣಯಿಸಿ, ಹೊಸತಾಗಿ ಸಂಪರ್ಕ ಪಡೆದವರಿಗೂ 200 ಯೂನಿಟ್‌ವರೆಗಿನ ಉಚಿತ ವಿದ್ಯುತ್‌ ಸೌಲಭ್ಯವನ್ನು ವಿಸ್ತರಿಸಬೇಕಿತ್ತು. ಸರಾಸರಿ ಬಳಕೆ ಪ್ರಮಾಣವನ್ನು ಪರಿಷ್ಕರಿಸದ ಕಾರಣ, ಹೊಸ ಮನೆ ಕಟ್ಟಿದ ಗ್ರಾಹಕರು 200 ಯೂನಿಟ್‌ ಒಳಗೆ ವಿದ್ಯುತ್‌ ಬಳಕೆ ಮಾಡುತ್ತಿದ್ದರೂ ಕೇವಲ ರಾಜ್ಯ ಸರ್ಕಾರ ಸರಾಸರಿಯ 58 ಯೂನಿಟ್‌ ವಿದ್ಯುತ್‌ನ ಉಚಿತ ಪಡೆಯುತ್ತಾರೆಯೇ ಹೊರತು, ‘ಉಚಿತ 200 ಯೂನಿಟ್‌ ವಿದ್ಯುತ್’ ಯೋಜನೆಯ ಲಾಭ ಪಡೆಯಲು ಸಾಧ್ಯ ವಾಗುತ್ತಿಲ್ಲ’ ಎಂದು ಇಂಧನ ಇಲಾಖೆಯ ಮೂಲಗಳು ತಿಳಿಸಿವೆ.

Comments are closed.