Home News Udupi: ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಬೆಂಕಿ ಅವಘಡ!

Udupi: ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಬೆಂಕಿ ಅವಘಡ!

Hindu neighbor gifts plot of land

Hindu neighbour gifts land to Muslim journalist

Udupi: ಉಡುಪಿ (Udupi) ಬ್ರಹ್ಮಾವರದಲ್ಲಿರುವ ವಾರಂಬಳ್ಳಿ ಪಂಚಾಯತ್ ಗೆ ಸೇರಿರುವ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಇಂದು ಮುಂಜಾನೆ ಬೆಂಕಿ ಅವಘಡ ಸಂಭವಿಸಿದ್ದು. ತ್ಯಾಜ್ಯ ಸಂಗ್ರಹ ಮಾಡುವ ವಾಹನ ಸ್ಪೋಟಗೊಂಡಿದೆ.

ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಘಟನೆಯಿಂದಾಗಿ ತ್ಯಾಜ್ಯ ಸಂಗ್ರಹ ವಾಹನವೊಂದು ಸ್ಫೋಟಗೊಂಡಿದೆ ಎನ್ನಲಾಗಿದೆ. ಬೆಂಕಿಗೆ ಎಸ್.ಎಲ್.ಆರ್.ಎಂ. ಘಟಕ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಯಂತ್ರೋಪಕರಣಗಳು ಮತ್ತು ಉಪಕರಣಗಳಿಗೆ ಹಾನಿಯಾಗಿದೆ. ಮಲ್ಪೆ, ಉಡುಪಿ, ಕುಂದಾಪುರದ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಮತ್ತು ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.