Kerala: ವಿವಾಹ ಭರವಸೆ, ರೇಪ್‌ ; ಕೇರಳ ವ್ಲಾಗರ್‌ ಬೆಂಗಳೂರಿನಲ್ಲಿ ಬಂಧನ

Share the Article

Kerala: ಯುವತಿಗೆ ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಕ್ರಿಯೆ ನಡೆಸಿ ನಂತರ ಬ್ಲಾಕ್‌ಮೇಲ್‌ ಮಾಡುತ್ತಿದ್ದ ಕೇರಳ ಮೂಲದ ವ್ಲಾಗರನ್ನು ಕೇರಳ ಪೊಲೀಸರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ ಮಾಡಿದ್ದಾರೆ.

ಮಲಪ್ಪುರಂನ ವಳಿಕದವು ಪ್ರದೇಶದ ಜುನೈದ್‌ ಬಂಧಿತ ವ್ಯಕ್ತಿ. ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿದಿ ಈತ ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿ, ನಗ್ನ ಚಿತ್ರ ಸೆರೆ ಹಿಡಿದು, ವಿವಿಧ ಹೋಟೆಲ್‌ಗಳಲ್ಲಿ ಅತ್ಯಾಚಾರಗೈದು ಬ್ಲಾಕ್‌ಮೇಲ್‌ ಮಾಡುತ್ತಿದ್ದ. ಇದೀಗ ಯುವತಿ ದೂರನ್ನು ನೀಡಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿಯನ್ನು ಬೆನ್ನತ್ತಿದ ಪೊಲೀಸರು ವಿದೇಶಕ್ಕೆ ಹಾರುವ ವೇಳೆ ಆರೋಪಿಯನ್ನು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸೆರೆಹಿಡಿದಿದ್ದಾರೆ.

ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕೇರಳಕ್ಕೆ ಕರೆದುಕೊಂಡು ಹೋಗಿದ್ದಾರೆ.

Comments are closed.