Home News Scam: ಹುಡುಗರೇ ಹುಷಾರ್, ಮೂತ್ರ ಸಂಗ್ರಹಿಸಿಟ್ಟು ಗರ್ಭದರಿಸಿ ಹಣ ಪೀಕುತ್ತಾರೆ ಹುಡುಗಿಯರು !! ಹೊಸ ವಂಚನೆಯ...

Scam: ಹುಡುಗರೇ ಹುಷಾರ್, ಮೂತ್ರ ಸಂಗ್ರಹಿಸಿಟ್ಟು ಗರ್ಭದರಿಸಿ ಹಣ ಪೀಕುತ್ತಾರೆ ಹುಡುಗಿಯರು !! ಹೊಸ ವಂಚನೆಯ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಯುವತಿ

Hindu neighbor gifts plot of land

Hindu neighbour gifts land to Muslim journalist

Scam: ಬದಲಾದ ಈ ಜಗತ್ತಿನಲ್ಲಿ ಅನೇಕ ರೀತಿಯ ಮೋಸ ವಂಚನೆ ಪ್ರಕರಣಗಳನ್ನು ನಾವು ನೋಡಿದ್ದೇವೆ. ಸೈಬರ್ ಕ್ರೈಂ, ಡಿಜಿಟಲ್ ಅಪರಾಧಾದಂತಹ ಪ್ರಕರಣಗಳು ದಿನ ಬೆಳಗಾದರೆ ಸಾಕು ನಮ್ಮ ಕಣ್ಣಿಗೆ ರಾಚುತ್ತವೆ. ಇದೀಗ ಅಂತದ್ದೇ ಒಂದು ಭಯಾನಕವಾದ ವಂಚನೆಯ ಜಾಲದ ಬಗ್ಗೆ ನಾವು ಹೇಳ ಹೊರಟಿದ್ದೇವೆ. ಹಾಗಂತ ಇದು ಸೈಬರ್ ಕ್ರೈಂ, ಡಿಜಿಟಲ್ ಅಪರಾಧ, ದಂಧೆ ಯಂತಹ ವಿಚಾರವಲ್ಲ. ಬದಲಿಗೆ ಮೂತ್ರವನ್ನು ಸಂಗ್ರಹಿಸಿಟ್ಟು ಚಾಲಾಕಿ ಮಹಿಳೆಯರು ಗರ್ಭ ಧರಿಸುವಂತಹ ಕಂಡು ಕೇಳರಿಯದಂತಹ ವಂಚನೆಯ ಜಾಲದ ಬಗ್ಗೆ.

ಯಸ್, ನಾವು ಹೇಳುತ್ತಿರುವುದು ಅಂತಿಂಥ ಸ್ಕ್ಯಾಮ್​ ಅಲ್ಲ. ಹುಡುಗಿಯರ ನಂಬಿ ಒಂದು ಸಲ ಅವಳ ಹಿಂದೆ ಹೋದ್ರೆ ಮುಗೀತು ನಿಮ್ಮ​ ಕಥೆ. ಬ್ಯಾಂಕ್​ ಖಾತೆ ಜೀರೋ, ನೀವು ಬೀದಿ ಪಾಲು! ಸಂದರ್ಶನವೊಂದರಲ್ಲಿ ಒಬ್ಬ ಹುಡುಗಿಯೇ ಅದನ್ನು ಬಯಲು ಮಾಡಿದ್ದಾಳೆ. ಅದರ ವಿಡಿಯೊ ಇದೀಗ ವೈರಲ್​ ಆಗಿದೆ.

ಸಂದರ್ಶನದಲ್ಲಿ ಹುಡುಗಿ ಹೇಳಿದ್ದೇನು?

‘ನಾನು ಒಬ್ಬ ಹುಡುಗನನ್ನು ಲವ್​ ಮಾಡ್ತಿದ್ದೆ. ಅವನಿಂದ ಗರ್ಭಿಣಿಯಾದೆ. ಅವನು ನನಗೆ ಗರ್ಭಪಾತ ಮಾಡಿಸಿದ. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ನಾನು ನನ್ನ ಮೂತ್ರವನ್ನು ಶೇಖರಿಸಿ ಫ್ರಿಜ್​ನಲ್ಲಿ ಇಟ್ಟುಕೊಂಡಿದ್ದೆ. ನನಗೆ ದುಡ್ಡು ಬೇಕಾದಾಗಲೆಲ್ಲಾ ಪ್ರೆಗ್ನೆನ್ಸಿ ಕಿಟ್​ ತಂದು ಅದರಲ್ಲಿ ಆ ಮೂತ್ರವನ್ನು ಹಾಕುತ್ತಿದ್ದೆ. ಆಗ ಸಹಜವಾಗಿ ಅದು ಪಾಸಿಟಿವ್​ ಎಂದು ತೋರಿಸುತ್ತಿತ್ತು. ಅದನ್ನೇ ನನ್ನ ಬಾಯ್​ಫ್ರೆಂಡ್​ಗೆ ತೋರಿಸಿ ದುಡ್ಡು ಪಡೆಯುತ್ತಾ ಬಂದಿದ್ದೇನೆ’ ಎಂದಿದ್ದಾಳೆ! ಇದನ್ನು ಕೇಳಿ ಸಂದರ್ಶಕನೇ ಸುಸ್ತು ಹೊಡೆದು ಹೋಗಿದ್ದಾನೆ.

ಪ್ರೆಗ್ನೆನ್ಸಿ ಕಿಟ್​ನಲ್ಲಿ ಗರ್ಭಿಣಿ ಹೌದೋ ಅಲ್ಲವೋ ಎನ್ನುವುದನ್ನು ಪರೀಕ್ಷೆ ಮಾಡಬಹುದು ಎನ್ನುವುದು ಬಹುತೇಕರಿಗೆ ತಿಳಿದಿರುವ ವಿಷಯವೇ. ಈ ಕಿಟ್​ನಲ್ಲಿ ಮೂತ್ರದ ಬಿಂದು ಹಾಕಿದಾಗ ಒಂದು ಕೆಂಪು ಗೆರೆ ಬಂದರೆ ಗರ್ಭಿಣಿಯಲ್ಲ ಎಂದು, ಆದರೆ ಗರ್ಭಿಣಿಯಾಗಿದ್ದರೆ ಎರಡು ಕೆಂಪು ಗೆರೆ ಬರುತ್ತದೆ. ಈ ಯುವತಿ, ಗರ್ಭ ಧರಿಸಿದ್ದ ಸಂದರ್ಭದಲ್ಲಿ ಸಂಗ್ರಹಿಸಿ ಇಟ್ಟುಕೊಂಡಿರುವ ಮೂತ್ರದ ಹನಿಗಳನ್ನು ಈ ಕಿಟ್​ನಲ್ಲಿ ಹಾಕಿ ತಾನು ಗರ್ಭಿಣಿ ಎಂದು ಹೇಳುತ್ತಾ ಬಂದಿದ್ದಾಳಂತೆ! ಅಷ್ಟಕ್ಕೂ ಈಕೆ ಯಾರು? ಈ ಗುಟ್ಟನ್ನು ಯಾಕೆ ಬಿಟ್ಟುಕೊಟ್ಟಿದ್ದಾಳೆ ಎನ್ನುವುದು ತಿಳಿದಲ್ಲ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪುರುಷರು ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಈ ರೀತಿಯೂ ಸ್ಕ್ಯಾನ್ ಮಾಡಬಹುದು ಎಂಬುದಾಗಿ ನಮಗೆ ತಿಳಿದಿಲ್ಲ. ಇನ್ನು ಹುಡುಗಿಯರ ಸಹವಾಸವೇ ಬೇಡ ಎಂಬುದಾಗಿ ಅನೇಕರು ಭಯಗೊಂಡಿದ್ದಾರೆ.