

Kumbamela: ವಿಶ್ವದ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾಕುಂಭಮೇಳವು ಸಂಪನ್ನಗೊಂಡಿದೆ. ಸುಮಾರು 63 ಕೋಟಿಗೂ ಅಧಿಕ ಭಕ್ತಾದಿಗಳು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಪುನೀತರಾಗಿದ್ದಾರೆ. ಹೀಗೆ ಸ್ನಾನ ಮಾಡುವಾಗ ಅನೇಕರು ಕೆಲವೊಂದು ಎಡವಟ್ಟು ಮಾಡಿಕೊಂಡಂತಹ ಪ್ರಕರಣಗಳು ಕೂಡ ನಾವು ನೋಡಿದ್ದೇವೆ. ಇದೀಗ ಇಂಥದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಕರ್ನಾಟಕದ ವ್ಯಕ್ತಿ ಒಬ್ಬರು ತ್ರಿವೇಣಿ ಸಂಗಮದಲ್ಲಿ ಮುಳುಗಿ ಎದ್ದಾಗ ಬರೋಬ್ಬರಿ ನಾಲ್ಕು ಲಕ್ಷದ ಚಿನ್ನದ ಸರವನ್ನು ಕಳೆದುಕೊಂಡಿದ್ದಾರೆ.
ಹೌದು, ಕರ್ನಾಟಕ ಮೂಲದ ಸುದರ್ಶನ್ ಎಂಬುವವರು ಸರ ಕಳೆದುಕೊಂಡ ದುರ್ದೈವಿಯಾಗಿದ್ದಾರೆ. ಅಂದಹಾಗೆ ಸುದರ್ಶನ್ ಮತ್ತು ಅವರ ಕುಟುಂಬವು ಸುಮಾರು 1,750 ಕಿ.ಮೀ ಪ್ರಯಾಣ ಮಾಡಿ ಮಹಾಕುಂಭಕ್ಕೆ ಹೋಗಿದ್ದರು. ಪ್ರಯಾಣದ ಖರ್ಚುವೆಚ್ಚಕ್ಕೆ 50,000 ರೂ.ಗಳನ್ನು ಖರ್ಚು ಮಾಡಿದರು. ಕುಟುಂಬವು ಸಂತೋಷದಿಂದ ಸ್ನಾನ ಮಾಡಿ ವೀಡಿಯೊ ರೆಕಾರ್ಡ್ ಮಾಡುತ್ತಿತ್ತು. ಆದರೆ ಸುದರ್ಶನ್ ನೀರಿನಲ್ಲಿ ಮುಳುಗಿದ ತಕ್ಷಣ, ಅವರು 4 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಕಳೆದುಕೊಂಡಿದ್ದಾರೆ.
ಇನ್ನು ಸುದರ್ಶನ್ ನಾಲ್ಕು ತೊಲಗಳಿಗಿಂತ ಹೆಚ್ಚು ತೂಕದ ಚಿನ್ನದ ಸರವನ್ನು ಧರಿಸುತ್ತಿದ್ದರು. ಅವರು ಆ ಚಿನ್ನದ ಸರದ ಮೇಲೆ ತುಂಬಾ ವ್ಯಾಮೋಹ ಹೊಂದಿದ್ದರು. ಅವರ ಸ್ನೇಹಿತರು ಅದನ್ನು ಮನೆಯಲ್ಲಿಯೇ ಬಿಡಲು ಸಲಹೆ ನೀಡಿದ್ದರೂ, ಅವರು ನಿರಾಕರಿಸಿದರು, ತನ್ನ ಅಮೂಲ್ಯ ವಸ್ತುವಿಲ್ಲದೆ ಕುಂಭಮೇಳಕ್ಕೆ ಹೋದ್ರೆ ನನಗೆ ಖುಷಿಯಾಗುವುದಿಲ್ಲ ಎಂದು ಹೇಳಿದ್ದರು. ಸ್ನಾನದ ನಂತರ, ಸರ ಕಾಣೆಯಾಗಿದೆ ಎಂದು ಅವರು ಅರಿವಾಯಿತು. ಪುರುಷರು ಮತ್ತು ಮಹಿಳೆಯರ ಗುಂಪಿನಿಂದ ತಳ್ಳುವಿಕೆ ನಡೆದಿದೆ, ಅದೆಲ್ಲ ಅವರ ಕ್ಯಾಮೆರಾ ದೃಶ್ಯಗಳನ್ನು ಹಲವು ಬಾರಿ ಪರಿಶೀಲಿಸಿದಾಗ, ಸರ ಮಾಯೆಯಾಗಿರುವುದು ಕಂಡುಬಂದಿದೆ.
ಈ ಘಟನೆ ಫೆಬ್ರವರಿ 19 ರಂದು ನಡೆದಿತ್ತು, ಆದರೆ ಸುದರ್ಶನ್ ದೂರು ನೀಡಲು ಹೋದ್ರೂ ಕೂಡ ಪೊಲೀಸರು ದೂರು ದಾಖಲಿಸಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಮಹಾ ಕುಂಭವು ಮಹಾಶಿವರಾತ್ರಿಯಂದು ಮುಕ್ತಾಯಗೊಳ್ಳುತ್ತಿದ್ದಂತೆ, ಅವರು ತಮ್ಮ ಸರವನ್ನು ಮರಳಿ ಪಡೆಯುವ ಎಲ್ಲಾ ಭರವಸೆಯನ್ನು ಕಳೆದುಕೊಂಡಿದ್ದಾರೆ.













