Mangaluru: ಯುವತಿಯ ನಂಬರ್‌ ಪಡೆದು ಬೆದರಿಕೆ ಕರೆ; ಆರೋಪಿಯ ಬಂಧನ

Share the Article

Mangaluru: ಸಾಮಾಜಿಕ ಜಾಲತಾಣದಲ್ಲಿ ಯುವತಿಯೋರ್ವಳ ನಂಬರ್‌ ಪಡೆದು ಅಶ್ಲೀಲ ವೀಡಿಯೋ ಇರುವುದಾಗಿ ಬೆದರಿಸಿ ಹಣ ಪಡೆಯುತ್ತಿದ್ದ ಆರೋಪಿಯನ್ನು ಕದ್ರಿ ಠಾಣೆಯ ಪೊಲೀಸರು ಬಂಧನ ಮಾಡಿದ್ದಾರೆ.

ಕಾರ್ಕಳ ಈದು ಗ್ರಾಮದ ಸತೀಶ್‌ ಹೊಸ್ಮಾರು (36) ಬಂಧಿತ ಆರೋಪಿ. ಹುಡುಗಿಯರ ಮೊಬೈಲ್‌ ನಂಬರ್‌ನ್ನು ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಐಡಿ ಮೂಲಕ ಪಡೆದು ನಿಮ್ಮ ಅಶ್ಲೀಲ ವೀಡಿಯೋ ಇರುವುದಾಗಿ ಹೇಳಿ ಬೆದರಿಕೆ ಹಾಕುತ್ತಿದ್ದ. ಹಣ ನೀಡದಿದ್ದರೆ ವೀಡಿಯೋ ವೈರಲ್‌ ಮಾಡುವುದಾಗಿ ಹೇಳುತ್ತಿದ್ದ. ಈ ಕುರಿತು ಮಹಿಳೆಯೊಬ್ಬರು ಕದ್ರಿ ಠಾಣೆಗೆ ದೂರನ್ನು ನೀಡಿದ್ದರು.

ಆರೋಪಿಯನ್ನು ಬಂಧನ ಮಾಡಿದ ಪೊಲೀಸರು ಆತನ ಮೊಬೈಲನ್ನು ಪಡೆದಿದ್ದಾರೆ. ಘಟನೆಗೆ ಸಂಬಂಧಪಟ್ಟ ದಾಖಲೆಗಳು ಲಭಿಸಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಮತ್ತು ನಗರ ಠಾಣೆಯಲ್ಲಿ ಕಳವು, ಮಹಿಳೆಯ ಮಾನಭಂಗ, ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ.

ಆರೋಪಿ ಸತೀಶ್‌ ಕಳೆದ ವರ್ಷ ಕಳವು ಪ್ರಕರಣದಲ್ಲಿ ಜೈಲು ಸೇರಿದ್ದು ಹೊರಗೆ ಬಂದಿದ್ದ.

Comments are closed.