Triple Talaq: ವಾಟ್ಸಪ್ ಮೂಲಕ ತಲಾಖ್ ಕಳುಹಿಸಿದ ಪತಿ

Kasaragod: ವಾಟ್ಸಪ್ ಮೂಲಕ ಯುವತಿಗೆ ತಲಾಖ್ ನೀಡಿದ ಪತಿಯ ವಿರುದ್ಧ ಕೇಸು ದಾಖಲಾಗಿದೆ. ನೆಲ್ಲಿಕಟ್ಟೆ ನಿವಾಸಿ ಅಬ್ದುಲ್ ರಝಾಕ್ ವಿರುದ್ಧ ಕಲ್ಲುರಾವಿ ನಿವಾಸಿ 21 ರ ಹರೆಯದ ಯುವತಿ ದೂರನ್ನು ನೀಡಿದ್ದಾರೆ.

ಫೆ.21 ರಂದು ಕೊಲ್ಲಿಯಲ್ಲಿ ಉದ್ಯೋಗದಲ್ಲಿರುವ ಅಬ್ದುಲ್ ರಝಾಕ್ ಯುವತಿಯ ತಂದೆಯ ಫೋನ್ಗೆ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ್ದಾನೆ. ಪತಿಯ ಸಂಬಂಧಿಕರು ನಿರಂತರವಾಗಿ ಕಿರುಕುಳ ನೀಡುತ್ತಿದ್ದುದಾಗಿ ಯುವತಿ ದೂರನ್ನು ನೀಡಿದ್ದಾಳೆ.
ಎರಡೂವರೆ ವರ್ಷಗಳಿಂದ ಪತಿಯ ತಾಯಿ, ಇಬ್ಬರು ಸಹೋದರಿಯರು ಅನ್ನ ಆಹಾರ ನೀಡದೆ ಕೊಠಡಿಯಲ್ಲಿ ಕೂಡಿ ಹಾಕಿ ದೌರ್ಜನ್ಯ ಮಾಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. 2022 ರಲ್ಲಿ ಇವರ ವಿವಾಹ ನಡೆದಿತ್ತು. 12 ಲಕ್ಷ ರೂ ನಗದನ್ನು ಅಬ್ದುಲ್ ರಝಾಕ್ ಪಡೆದುಕೊಂಡಿರುವುದಾಗಿ ಯುವತಿಯ ತಂದೆ ಆರೋಪ ಮಾಡಿದ್ದಾರೆ.
ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮಾಡುತ್ತಿದ್ದಾರೆ.
Comments are closed.