Babaladi Muthya : ಶಿಕ್ಷಣ ಕ್ಷೇತ್ರ, ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆ, ಕಲಿಯುಗದ ಸರ್ವನಾಶ !! ಸ್ಪೋಟಕ ಭವಿಷ್ಯ ನುಡಿದ ಬಬಲಾದಿ ಮುತ್ಯಾ

Share the Article

Babaladi Muthya: ರಾಜ್ಯ ರಾಜಕೀಯ ಹಾಗೂ ನೈಸರ್ಗಿಕ ಬೆಳವಣಿಗೆಗಳ ಕುರಿತು ಇತ್ತೀಚಿಗಷ್ಟೇ ಕೋಡಿಮಠದ ಶ್ರೀಗಳು ಅಚ್ಚರಿಯ ಭವಿಷ್ಯ ನುಡಿದಿದ್ದರು. ಇದೀಗ ಈ ಬೆನ್ನಲ್ಲೇ ವಿಜಯಪುರ (Vijayapura) ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಮುತ್ಯಾನ ಮಠದ ಸ್ವಾಮೀಜಿ 2025ರ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ.

ಹೌದು, ವಿಜಯಪುರದ ಬೆಂಕಿ ಬಬಲಾದಿ ಸದಾಶಿವ ಮುತ್ಯಾನಮಠದ ಸದಾಶಿವ ಮುತ್ಯಾ 2025ರ ಕುರಿತು ಕಾಲಜ್ಞಾನವನ್ನು ಹೇಳಿದ್ದಾರೆ. ಅವರ ಹೇಳಿಕೆ ಸದ್ಯ ಭಕ್ತರಲ್ಲಿ ಆತಂಕ ಮೂಡಿಸಿದೆ. ಈ ವರ್ಷ ಸದಾಶಿವಪ್ಪ ಚಿಕ್ಕಯ್ಯಮುತ್ಯಾ ಬರೆದಿಟ್ಟಿರುವ ಕಾಲಜ್ಞಾನವನ್ನು ಓದಿ ಹೇಳಿದ್ದು, ಕಲಿಯುಗದ ಆಟ ಸರ್ವನಾಶ ಹೊಂದುವ ಸಮಯ ಬಂದಿತು ತಿಳಿಯಿರಣ್ಣ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಹೊಸ ತಿರುವುಗಳಾಗಲಿದ್ದು, ಹಣದ ಹಿಂದೆ ಜನರಿಗೆ ಬಂಧುತ್ವದ ಬಗ್ಗೆ ತಿಳಿಯುವ ಸಮಯ ಬಂದಿದೆ. ಈ ವರ್ಷ ವಿದ್ಯುಚ್ಛಕ್ತಿ ಮತ್ತು ನೀರಿನ ಕೊರತೆ ಬಹಳವಾಗಿ ಕಾಡಲಿದೆ ಎಂದು ಹೇಳಿದ್ದಾರೆ. ಅಂದರೆ ಈ ಬಾರಿ ರಾಜ್ಯದಲ್ಲಿ ಮಳೆಯ ಕೊರತೆಯಾಗಬಹುದು ಎಂದು ಹೇಳಿದ್ದು ಭಕ್ತರ ಆತಂಕಕ್ಕೆ ಕಾರಣವಾಗಿದೆ.

ಧರ್ಮ ಧರ್ಮಗಳ ನಡುವೆ ಕಿತ್ತಾಟ ಹೆಚ್ಚಾಗುತ್ತದೆ. ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆಯಾಗುತ್ತೆ. ಈ ವರ್ಷದಲ್ಲಿ ಮಾನವೀಯತೆ, ಮನುಷ್ಯತ್ವದ ಹೊಸ ಸಂಚಲನ ಮೂಡುತ್ತದೆ ಎಂದು ಅಚ್ಚರಿಯ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ. ಇನ್ನು ಈ ಸ್ಫೋಟಕ ಭವಿಷ್ಯದಲ್ಲಿ ಬರದ ಮುನ್ಸೂಚನೆಯನ್ನು ಶ್ರೀಗಳು ನೀಡಿದ್ದಾರೆ. ಸಿಎಂ ಬದಲಾವಣೆ, ಪಕ್ಷದಲ್ಲಿ ಒಳಜಗಳ ಬೆನ್ನಲ್ಲೇ ಸಿದ್ಧರಾಮಯ್ಯ ಹೊಳಿಮಠ ಗುರುಗಳು ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದು ಹೇಳಿರುವ ಭವಿಷ್ಯ ಮತ್ತಷ್ಟು ಗೊಂದಲವನ್ನು ಉಂಟು ಮಾಡಿದೆ.

Comments are closed.