Kolkata: ಮಗಳ ಅನಾರೋಗ್ಯ; ತಂದೆ, ಮಗಳು ನೇಣಿಗೆ ಶರಣು

Kolkata: ಪರ್ಣಶ್ರೀ ಪ್ರದೇಶದಲ್ಲಿ ತಂದೆ, ಮಗಳೂ ಆತ್ಮಹತ್ಯೆಗೈದಿರುವ ಘಟನೆ ನಡೆದಿದೆ. ಮಗಳ ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ರಾಮೇಶ್ವರಪುರ ನಿವಾಸಿಗಳಾದ ಸಜನ್‌ದಾಸ್ (53), ಶ್ರೀಜಾ ದಾಸ್ (22) ಇಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಜನ್ ಅವರು ವಾಟರ್ ಪ್ಯೂರಿಫೈಯರ್, ಚಿಮಣಿ ಈ ರೀತಿಯ ರಿಪೇರಿ ಕೆಲಸಗಳನ್ನು ಮಾಡುತ್ತಿದ್ದು, ಇವರ ಮಗಳು ಶ್ರೀಜಾ ಹುಟ್ಟಿನಿಂದಲೇ ಆಟಿಸಂ ಖಾಯಿಲೆಯಿಂದ ಬಳಲುತ್ತಿದ್ದಳು. ನಿರಂತರ ಔಷಧಿ ನೀಡಬೇಕಿತ್ತು. ಮಗಳ ಅನಾರೋಗ್ಯದ ಕುರಿತು ಹಾಗೂ ವೈದ್ಯಕೀಯ ಖರ್ಚಿನ ಬಗ್ಗೆ ಚಿಂತೆಗೊಳಗಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
Comments are closed.