Home News New Rule: 15 ವರ್ಷ ಹಳೆಯ ವಾಹನಗಳಿಗೆ ಪೆಟ್ರೋಲ್‌, ಡೀಸೆಲ್‌ ಇಲ್ಲ-ಮಾ.31 ರಿಂದ ಹೊಸ ನಿಯಮ

New Rule: 15 ವರ್ಷ ಹಳೆಯ ವಾಹನಗಳಿಗೆ ಪೆಟ್ರೋಲ್‌, ಡೀಸೆಲ್‌ ಇಲ್ಲ-ಮಾ.31 ರಿಂದ ಹೊಸ ನಿಯಮ

Hindu neighbor gifts plot of land

Hindu neighbour gifts land to Muslim journalist

Delhi: ಹಿಂದೆ ದೆಹಲಿಯ ವಾಯುಮಾಲಿನ್ಯ ನಿಯಂತ್ರಣಕ್ಕೆ ಆಪ್‌ ಸರಕಾರ ಸಮ, ಬೆಸ ಸಂಖ್ಯೆಯ ನಿಯಮವನ್ನು ಜಾರಿಗೆ ತಂದಿತ್ತು. ಇದೀಗ ಬಿಜೆಪಿ ಸರಕಾರ ದೆಹಲಿ ಗದ್ದುಗೆ ಏರಿದ್ದರಿಂದ ವಾಯುಮಾಲಿನ್ಯವನ್ನು ತಡೆಯಲು ಹೊಸ ನಿಯಮವನ್ನು ಜಾರಿಗೆ ತರಲು ನಿರ್ಧಾರ ಮಾಡಿದೆ. ದೆಹಲಿಯ ಪರಿಸರ ಇಲಾಖೆ ಮಹತ್ವದ ಆದೇಶವನ್ನು ಹೊರಡಿಸಿದ್ದು, ಮಾರ್ಚ್‌ 31 ರಿಂದ ಹೊಸ ನಿಯಮ ಜಾರಿಗೆ ಬರುತ್ತದೆ.

ದೆಹಲಿಯ ಯಾವುದೇ ಪೆಟ್ರೋಲ್‌ ಬಂಕ್‌ಗಳಲ್ಲಿ 15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳಿಗೆ ಪೆಟ್ರೋಲ್‌, ಡೀಸೆಲ್‌ ಹಾಕಲ್ಲ, ಯಾವುದೇ ಕಾರಣಕ್ಕೂ ಹಳೆಯ ವಾಹನಗಳು ರಸ್ತೆಗೆ ಇಳಿಯದಂತೆ ಮಾರ್ಚ್‌ 31 ರಿಂದ ಈ ಕ್ರಮ ಜಾರಿಗೆ ಬರಲಿದೆ.

ದೆಹಲಿಯಲ್ಲಿ ಈ ಹಿಂದೆ ಸಮ-ಬೆಸ ಸಂಖ್ಯೆಯ ವಾಹನ ಸಂಚಾರ ನಿಯಮ ಬಂದಾಗಲೂ ಯಾವುದೇ ಪ್ರಯೋಜನ ಆಗಿರಲಿಲ್ಲ. ದೆಹಲಿಯಲ್ಲಿ ವಾಯು ಮಾಲಿನ್ಯ ವರ್ಷದಿಂದ ವರ್ಷಕ್ಕೆ ಹೆಚ್ಚಳ ಆಗುತ್ತಲೇ ಇರುತ್ತದೆ. ಹೀಗಾಗಿ ಬಿಜೆಪಿ ಸರಕಾರ ಹಳೆಯ ವಾಹನಗಳ ಸಂಚಾರಕ್ಕೆ ಬ್ರೇಕ್‌ ಹಾಕಲು ಕಠಿಣ ಕ್ರಮಕ್ಕೆ ಮುಂದಾಗಿದೆ.