Viral Video : ಪಾಪ.. ಮೂತ್ರ ವಿಸರ್ಜನೆಗೆ ರೈಲನ್ನೇ ನಿಲ್ಲಿಸಿದ ಲೋಕೋ ಪೈಲೆಟ್!!

Share the Article

Viral Video : ಚಲಿಸುತ್ತಿದ್ದ ರೈಲು ಇದ್ದಕ್ಕಿದ್ದಂತೆ ನಿಂತುಬಿಟ್ಟಿತು. ಪ್ರಯಾಣಿಕರೆಲ್ಲರೂ ಯಾವುದು ಸ್ಟೇಷನ್ ಬಂತು ಎಂದು ಹೊರಗೆ ಕತ್ತು ಹಾಕಿ ನೋಡಿದರು. ಆದರೆ ಯಾವುದು ಸ್ಟೇಷನ್ ಅಲ್ಲಿರಲಿಲ್ಲ. ಅಥವಾ ಕ್ರಾಸಿಂಗ್ ಇರಬಹುದು ಎಂದು ಸುಮ್ಮನಾದರು ಆದರೂ ಕೂಡ ಪಕ್ಕದಲ್ಲಿ ರೈಲ್ವೆ ಟ್ರ್ಯಾಕ್ ಇರಲಿಲ್ಲ. ಅಯ್ಯೋ.. ಏನಾದರೂ ತುರ್ತು ಸಂದರ್ಭ ದೂರ ಇದೆ ಎಂದು ಪ್ರಯಾಣಿಕರೆಲ್ಲರೂ ಗಾಬರಿ ಬಿದ್ದರು. ಕೆಲವೇ ನಿಮಿಷಗಳಲ್ಲಿ ರೈಲು ಏಕೆ ನಿಂತಿತು ಎಂದು ಇಡೀ ಪ್ರಯಾಣಿಕರಿಗೆ ಗೊತ್ತಾಯಿತು.

ಅದೇನೆಂದರೆ ಲೋಕೋ ಪೈಲಟ್ ಗೆ ಅದೇನು ಅವಸರ ಆಗಿತ್ತೋ ಏನೋ..ಮೂತ್ರ ವಿಸರ್ಜನೆ ಮಾಡುವ ಸಲುವಾಗಿ ಈ ಲೋಕೋ ಪೈಲಟ್‌ ರೈಲನ್ನು ಈ ರೀತಿ ನಿಲ್ಲಿಸಿದ್ದಾರೆ. ಈ ಘಟನೆ ನಡೆದಿರೋದು ಮುಂಬೈ ನಲ್ಲಿ. ಈ ಘಟನೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಚಲಿಸುತ್ತಿದ್ದ ರೈಲನ್ನು ಲೋಕೋ ಪೈಲಟ್‌ ಅರ್ಧ ದಾರಿಯಲ್ಲಿ ನಿಲ್ಲಿಸಿ ರೈಲಿನಿಂದ ಕೆಳಗಿಳಿದು ಬಂದವನೇ ರೈಲ್ವೆ ಹಳಿಯ ಮೇಲೆಯೇ ಮೂತ್ರ ವಿಸರ್ಜಿನೆ ಮಾಡಿರುವ ಘಟನೆಯ ವಿಡಿಯೋ ಇದು.

ಆದ್ರೆ ಈ ಘಟನೆಯ ಈಗಿನದ್ದಲ್ಲ. ಇದು ಸುಮಾರು 5 ವರ್ಷಗಳ ಹಿಂದಿನ ಘಟನೆಯ ವಿಡಿಯೋ. ಲೋಕಲ್‌ ಟ್ರೈನ್ ಉಲ್ಹಾಸ್‌ ನಗರದಿಂದ ಮುಂಬೈಗೆ ಸಾಗುತ್ತಿದ್ದ ವೇಳೆ ಮೂತ್ರ ವಿಸರ್ಜಿಸಲು ಲೋಕೋ ಪೈಲಟ್ ರೈಲನ್ನು ನಿಲ್ಲಿಸಿ ಹಳಿಯ ಮೇಲೆಯೇ ಮೂತ್ರ ವಿಸರ್ಜಿಸಿ ವಾಪಸ್‌ ಹೋಗಿದ್ದರು. ಈ ಘಟನೆ 2019 ರಲ್ಲಿ ಬಾರೀ ಸದ್ದು ಮಾಡಿತ್ತು. ಇದೀಗ ಇದ್ದಕ್ಕಿದ್ದಂತೆ ಮತ್ತೊಮ್ಮೆ ವೈರಲ್‌ ಆಗಿದೆ.

Comments are closed.