Shilpa Shetty: ‘ದೇವರ ಮೇಲಿರೋ ಹೂ ಕೊಡಿ’ ಎಂದು ತುಳುವಿನಲ್ಲಿ ಮುದ್ದು ಮುದ್ದಾಗಿ ಕೇಳಿದ ಶಿಲ್ಪಶೆಟ್ಟಿ !! ವಿಡಿಯೋ ವೈರಲ್

Shilpa Shetty: ಬಾಲಿವುಡ್ ನಲ್ಲಿರುವ ಅನೇಕ ನಟಿಯರು ಕರ್ನಾಟಕದ ಕರಾವಳಿ ಮೂಲದವರು. ಅಂತೆಯೇ ಶಿಲ್ಪ ಶೆಟ್ಟಿ ಅವರು ಕೂಡ ಮಂಗಳೂರಿನವರು. ಮಂಗಳೂರಿನವರೆಂದ ಮೇಲೆ ಅವರಿಗೆ ತುಳು ಬರಲೇಬೇಕು. ಶಿಲ್ಪ ಶೆಟ್ಟಿ ಮಂಗಳೂರಿಂದ ದೂರಾಗಿ ಅನೇಕ ವರ್ಷಗಳಾದರೂ ಕೂಡ ಅವರು ಪರ್ಫೆಕ್ಟ್ ಆಗಿ ತುಳು ಮಾತನಾಡುತ್ತಾರೆ.

ಅಷ್ಟು ಮಾತ್ರವಲ್ಲದೆ ಶಿಲ್ಪಶೆಟ್ಟಿಯವರು ಕಟೀಲು ದುರ್ಗಾಪರಮೇಶ್ವರಿಯ ಪರಮ ಭಕ್ತ. ಪ್ರತಿವರ್ಷ ಕೂಡ ಅವರು ಕಟೀಲಿಗೆ ಭೇಟಿಕೊಟ್ಟು ಅಮ್ಮನ ದರ್ಶನ ಪಡೆಯುತ್ತಾರೆ. ಅಂತೆಯೇ ಇದೀಗ ಶಿಲ್ಪಶೆಟ್ಟಿ ಅವರು ಕಟೀಲಿಗೆ ಆಗಮಿಸಿ ದುರ್ಗಾಪರಮೇಶ್ವರಿಯ ದರ್ಶನ ಪಡೆದಿದ್ದಾರೆ. ಈ ವೇಳೆ ಅವರು ಅಲ್ಲಿನ ಅರ್ಚಕರ ಬಳಿ ‘ಅಮ್ಮನವರ ಮೇಲಿರುವ ಹೂವನ್ನು ಕೊಡಿ’ ಎಂದು ತುಳುವಿನಲ್ಲಿ ಮುದ್ದು ಮುದ್ದಾಗಿ ಕೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
Comments are closed.