Home News Tamannah Bhatia: ತಮನ್ನಾ ಭಾಟಿಯಾ, ಕಾಜಲ್‌ಗೆ ಪೊಲೀಸರ ನೋಟಿಸ್ ‌

Tamannah Bhatia: ತಮನ್ನಾ ಭಾಟಿಯಾ, ಕಾಜಲ್‌ಗೆ ಪೊಲೀಸರ ನೋಟಿಸ್ ‌

Hindu neighbor gifts plot of land

Hindu neighbour gifts land to Muslim journalist

Tamannah Bhatia: ಮಹದೇವ ಬೆಟ್ಟಿಂಗ್‌ ಅಪ್ಲಿಕೇಷನ್‌ ವಿಷಯದಲ್ಲಿ ನಟಿಯರಾದ ತಮನ್ನಾ ಭಾಟಿಯಾ ಮತ್ತು ನಟಿ ಕಾಜಲ್‌ ಅಗರ್‌ವಾಲ್‌ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಈ ಪ್ರಕರಣದಲ್ಲಿ ಅನೇಕ ಬಾಲಿವುಡ್‌ ಸ್ಟಾರ್‌ ನಟರಿಗೆ ಪೊಲೀಸರು ನೋಟಿಸ್‌ ನೀಡಿ ವಿಚಾರಣೆ ಮಾಡಿದ್ದರು.

ಇದೀಗ 2.40 ಕೋಟಿ ವಂಚನೆ ಪ್ರಕರಣದಲ್ಲಿ ತಮನ್ನಾ ಭಾಟಿಯಾ ಮತ್ತು ಕಾಜಲ್‌ ಅಗರ್‌ವಾಲನ್ನು ಸಹ ಆರೋಪಿಗಳನ್ನಾಗಿ ಮಾಡಲಾಗಿದೆ. ಸಂತ್ರಸ್ತರು ಪುದುಚೇರಿ ಪೊಲೀಸ್‌ ಠಾಣೆಯಲ್ಲಿ ವಂಚಕರ ಜೊತೆಗೆ ತಮನ್ನಾ ಹಾಗೂ ಕಾಜಲ್‌ ವಿರುದ್ಧ ದೂರು ನೀಡಿದ್ದಾರೆ.

2020 ರಲ್ಲಿ ಕ್ರಿಸ್ಟೋ ಕರೆನ್ಸಿ ಕಂಪನಿ ಹೆಸರಿನ ಕಂಪನಿಯನ್ನು ಕೊಯಂಬತ್ತೂರಿನಲ್ಲಿ ಸ್ಥಾಪನೆ ಸಂದರ್ಭದಲ್ಲಿ ತಮನ್ನ ಭಾಟಿಯಾ ಅತಿಥಿಯಾಗಿ ಬಂದಿದ್ದರು. ನಂತರ ಈ ಕಂಪನಿಯ ವಾರ್ಷಿಕ ಮಹೋತ್ಸವಕ್ಕೆ ಮಹಬಲಿಪುರಂನ ಐಶರಾಮಿ ಹೋಟೆಲ್‌ನಲ್ಲಿ ಮಡಲಾಗಿತ್ತು. ಆ ಸಂದರ್ಭದಲ್ಲಿ ನಟಿ ಕಾಜಲ್‌ ಅಗರ್‌ವಾಲ್‌ ಬಂದಿದ್ದರು.

ಹಣವನ್ನು ದುಪ್ಪಟ್ಟು ಮಾಡುವುದಾಗಿ 10 ಜನರಿಂದ ಹಣ ತೆಗೆದುಕೊಂಡು ಸುಮಾರು 2.40 ಕೋಟಿ ಹಣವನ್ನು ಕಂಪನಿ ತಮಗೆ ಮೋಸ ಮಾಡಿದೆ ಎಂದು ನಿವೃತ್ತಿ ಸರಕಾರಿ ನೌಕರ ಅಶೋಕ್‌ ಎಂಬುವವರು ಪುದುಚೇರಿ ಪೊಲೀಸರಿಗೆ ದೂರುನ್ನು ನೀಡಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರ ಬಂಧನ ಈಗಾಗಲೇ ಆಗಿದೆ.