D K Shivkumar : ತನ್ನ ನಿಜ ಹೆಸರನ್ನು ರಿವೀಲ್ ಮಾಡಿದ ಡಿಕೆ ಶಿವಕುಮಾರ್ – ಏನದು ಗೊತ್ತಾ?

Share the Article

D K Shivkumar : ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ತನ್ನ ನಿಜನಾಮವನ್ನು ಸಾರ್ವಜನಿಕರ ಮುಂದೆ ಬಯಲು ಮಾಡಿದ್ದಾರೆ. ಹಾಗಿದ್ರೆ ಡಿಕೆಶಿಯ ನಿಜವಾದ ಹೆಸರೇನು?

ಶಿವರಾತ್ರಿಯ ನಿಮಿತ್ತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಕೊಯಮತ್ತೂರಿನ ಇಶಾ ಫೌಂಡೇಶನ್ ನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು , ಆಧ್ಯಾತ್ಮಿಕ ಲೋಕದಲ್ಲಿ ಮಿಂದೆದ್ದು ಪುನೀತರಾಗಿದ್ದಾರೆ.

ಈ ಕುರಿತು ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರೋ ಡಿಕೆಶಿ ‘ಕೊಯಮತ್ತೂರಿನ ಇಶಾ‌ ಯೋಗ ಕೇಂದ್ರದಲ್ಲಿ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ.ಸದ್ಗುರು ಅವರು ಪ್ರತಿ ಶಿವರಾತ್ರಿಯಂದು ನಡೆಸಿಕೊಡುವ ಈ ಕಾರ್ಯಕ್ರಮದ ಬಗ್ಗೆ ಕೇಳಿದ್ದೆ, ಕಣ್ಣಾರೆ ನೋಡಿ ಇದು ಶಿವಭಕ್ತಿಯ ಶಿಖರ ಅನಿಸಿತು. ನನ್ನ ಹೆಸರಲ್ಲೇ ಶಿವನಿದ್ದಾನೆ. ಅದರ ಹಿಂದೆ ಸ್ವಾರಸ್ಯಕರ ಸಂಗತಿ ಇದೆ..ದೊಡ್ಡ ಆಲಹಳ್ಳಿಯಲ್ಲಿ ಶಿವಾಲ್ದಪ್ಪನ ಬೆಟ್ಟ ಇದೆ. ನಮ್ಮ ಮನೆಯಲ್ಲಿ ಯಾರೇ ಹುಟ್ಟಿದರೂ ಮೊದಲು ಹೆಣ್ಮಕ್ಕಳಿಗೆ ಕೆಂಪಮ್ಮ ಅಂತ ಹೆಸರಿಡುತ್ತಾರೆ. ಗಂಡು ಮಕ್ಕಳಿಗೆ ಕೆಂಪೇಗೌಡ ಅಂತ ಹೆಸರಿಡುತ್ತಾರೆ. ಅದು ಪದ್ದತಿ. ಶಿವಾಲ್ದಪ್ಪನಿಗೆ ನನ್ನ ತಾಯಿ ಹರಕೆ ಮಾಡಿಕೊಂಡಿದ್ದರು. ನಾನು ಹುಟ್ಟಿದ್ದಕ್ಕೆ ನನಗೆ ಮೊದಲು ಕೆಂಪರಾಜ್ ಅಂತ ಹೆಸರಿಟ್ಟು, ಆನಂತರ ಶಿವಾಲ್ದಪ್ಪನಿಗಾಗಿ ಶಿವಕುಮಾರ್ ಅಂತ ಹೆಸರಿಟ್ಟರು’ ಎಂದಿದ್ದಾರೆ.

Comments are closed.