Bollywood: ಬಾಗ್ಬಾನ್ ನಟ ಅಮನ್ ವರ್ಮಾ ಮತ್ತು ವಂದನಾ ಲಾಲ್ವಾನಿ ವಿಚ್ಛೇದನ

Bollywood: ಖ್ಯಾತ ಕಿರುತೆರೆ ಜೋಡಿ ದಾಂಪತ್ಯ ಜೀವನವನ್ನು ಕೊನೆಗಾನಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಜನಪ್ರಿಯ ಕಿರುತೆರೆ, ಚಲನಚಿತ್ರ ನಟ ಅಮನ್ ವರ್ಮಾ -ವಂದನಾ ಲಾಲ್ವಾನಿ ತಮ್ಮ 9 ವರ್ಷಗಳ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ.

ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳಿರುವುದರಿಂದ ಅವುಗಳನ್ನು ಸರಿಪಡಿಸಲು ಪ್ರಯತ್ನ ಪಟ್ಟರೂ ಪರಿಸ್ಥಿತಿ ಸುಧಾರಿಸಲಿಲ್ಲ. ಇಬ್ಬರ ಕುಟುಂಬ ಈ ಕುರಿತು ಮಾತನಾಡಿದರೂ ಸಮಸ್ಯೆಗೆ ಪರಿಹಾರ ದೊರಕಿಲ್ಲ. ಹೀಗಾಗಿ ವಂದನಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿರುವುದಾಗಿ ಮೂಲವೊಂದು ವರದಿ ಮಾಡಿದೆ.
ಅಮನ್ ವರ್ಮಾ ಈ ಕುರಿತು ಏನೇ ಹೇಳುವುದಿದ್ದರೂ ವಕೀಲರ ಮೂಲಕ ಹೇಳುತ್ತೇವೆ ಎಂದು ಹೇಳಿರುವುದಾಗಿ ಹೇಳಿದ್ದಾರೆ.
Comments are closed.