1984 Anti Sikh Riots: ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್‌ಗೆ ಮತ್ತೊಮ್ಮೆ ಜೀವಾವಧಿ ಶಿಕ್ಷೆ

1984 Anti Sikh Riots: ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಅವರಿಗೆ 1984 ರ ಸಿಖ್ ವಿರೋಧಿ ದಂಗೆಯ ನೇತೃತ್ವ ವಹಿಸಿದ್ದಕ್ಕೆ ಸರಸ್ವತಿ ವಿಹಾರ್ ಹತ್ಯೆಗಳಲ್ಲಿ ಅವರ ಪಾತ್ರದ ಕುರಿತು ದೆಹಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಎರಡನೇ ಜೀವಾವಧಿ ಶಿಕ್ಷೆಗೊಳಗಾಗಿದ್ದಾರೆ ಸಜ್ಜನ್ ಕುಮಾರ್. ವಿಶೇಷ ಕೋರ್ಟ್ ನ್ಯಾಯಾಧೀಶೆ ಕಾವೇರಿ ಬವೇಜಾ ಸಜ್ಜನ್ ಕುಮಾರ್ ಅವರಿಗೆ ಶಿಕ್ಷೆ ಪ್ರಮಾಣ ಪ್ರಕಟ ಮಾಡಿದ್ದಾರೆ.

ದೆಹಲಿ ಕಂಟೋನ್ಮೆಂಟ್ ದಂಗೆ ಪ್ರಕರಣದಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸುತ್ತಿರುವ ಸಜ್ಜನ್ ಕುಮಾರ್ ಅವರಿಗೆ ಇದು ಎರಡನೇ ಜೀವಾವಧಿ ಶಿಕ್ಷೆಯಾಗಿದೆ. ಪೊಲೀಸರು ಮರಣದಂಡನೆ ನೀಡುವಂತೆ ಕೋರಿದ್ದರು. ಆದರೆ ಜೀವಾವಧಿ ಶಿಕ್ಷೆ ನೀಡಲಾಗಿದೆ.
Comments are closed.