Udupi: ಅನುಮಾನಸ್ಪದ ವಿದೇಶೀ ಬೋಟ್ ಪತ್ತೆ

Udupi: ಉಡುಪಿ ಜಿಲ್ಲೆಯ ಮಲ್ಪೆ ಆಳ ಸಮುದ್ರದಲ್ಲಿ ವಿದೇಶೀ ಬೋಟ್ ಪತ್ತೆಯಾಗಿದ್ದು, ಮಲ್ಪೆಯ ಸೈಂಟ್ ಮೇರಿಸ್ ದ್ವೀಪದಲ್ಲಿ ಓಮನ್ ಮೂಲದ ಮೀನುಗಾರಿಕಾ ಬೋಟ್‌ವೊಂದು ಓಮನ್ ಹಾರ್ಬರ್‌ನಿಂದ ತಪ್ಪಿಸಿಕೊಂಡು ಭಾರತೀಯ ಸಮುದ್ರಕ್ಕೆ ಬಂದಿದೆ ಎನ್ನಲಾಗಿದೆ.

ಬೋಟ್‌ನಲ್ಲಿ ತಮಿಳುನಾಡು ಮೂಲದ ಮೀನುಗಾರರು ಪತ್ತೆಯಾಗಿದ್ದಾರೆ.
ಬೋಟ್ ಮಾಲೀಕ ಬೋಟ್‌ನಲ್ಲಿದ್ದ ಮೀನುಗಾರರ ಪಾಸ್‌ಪೋರ್ಟ್ ವಶಕ್ಕೆ ಪಡೆದಿದ್ದು, ಚಿತ್ರಹಿಂಸೆ ನೀಡುತ್ತಿದ್ದ ಕಾರಣ ಪ್ರಾಣಭಯದಿಂದ ಓಮನ್ ಹಾರ್ಬರ್‌ನಿಂದ ತಪ್ಪಿಸಿಕೊಂಡು ಬಂದಿದ್ದರು. ನಾಲ್ಕು ಸಾವಿರ ಕಿ.ಮೀ. ಕ್ರಮಸಿ ಭಾರತಕ್ಕೆ ಬಂದಿದ್ದರು. ಬೋಟ್ ಕಾರವಾರ ದಾಟಿ ಮಲ್ಪೆಯತ್ತ ಪ್ರಯಾಣ ಮಾಡಿದೆ. ಆಗ ಡೀಸೆಲ್, ಹಣ, ಆಹಾರ ಎಲ್ಲಾ ಖಾಲಿಯಾಗಿದ್ದು, ಪರದಾಡಿದ್ದಾರೆ.
ಸೈಂಟ್ ಮೇರಿಸ್ ದ್ವೀಪದ ಬಳಿಕ ಸ್ಥಳೀಯ ಮೀನುಗಾರರು ವಿದೇಶಿ ಬೋಟನ್ನು ನೋಡಿ ಕೋಸ್ಟ್ ಗಾರ್ಡ್‌ಗೆ ಮಾಹಿತಿ ನೀಡಿದ್ದಾರೆ. ಅಮರ್ಥ್ಯ ಕೋಸ್ಟ್ ಗಾರ್ಡ್ ವಿದೇಶಿ ಬೋಟ್‌ನ ಮೀನುಗಾರರನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡುತ್ತಿದೆ.
Comments are closed.