Belthangady: ವಜ್ರದ ಅಭರಣ ಖರೀದಿ ಮಾಡಿದ ಗ್ರಾಹಕರೊಬ್ಬರಿಗೆ ಮುಳಿಯದಿಂದ ಸಿಕ್ಕಿತು ಸೆಲೆರಿಯೋ ಕಾರು!

Belthangady: ಮುಳಿಯ ಜುವೆಲ್ಲರಿಯ ಬೆಳ್ತಂಗಡಿ (Belthangady) ಶಾಖೆಯಲ್ಲಿ ಅಗಸ್ಟ್ 15, 2024ರಿಂದ ನ.30, 2024ರ ಒಳಗಡೆ 20 ಸಾವಿರ ರೂಪಾಯಿಗಿಂತ ಮೇಲ್ಪಟ್ಟು ವಜ್ರ ಖರೀದಿ ಮಾಡಿದವರಿಗೆ ಸೆಲೆರಿಯೋ ಕಾರ್ ಗೆಲ್ಲುವ ಲಕ್ಕಿ ಕೂಪನ್ ನೀಡಲಾಗಿತ್ತು. ಇದರಲ್ಲಿ ಒಟ್ಟು 235 ರಷ್ಟು ಕೂಪನ್‌ಗಳು ಬಂದಿದ್ದು ಕಾರ್ ಡ್ರಾ ಕಾರ್ಯಕ್ರಮವನ್ನು ಫೆ. 24ರಂದು ಸಂಜೆ 4 ಗಂಟೆಗೆ ಮುಳಿಯ ಆಭರಣ ಮಳಿಗೆಯಲ್ಲಿ ಆಯೋಜನೆ ಮಾಡಿದ್ದು, ಇಕೋ ಫ್ರೆಸ್ ಎಂಟರ್ ಪ್ರೈಸಸ್ ಬೆಳ್ತಂಗಡಿ ಹಾಗೂ ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಉದ್ಘಾಟನೆ ಮಾಡಿದರು.

ಕಾರ್ಯಕ್ರಮ ಉದ್ಘಾಟಕ ರಾಕೇಶ್ ಹೆಗ್ಡೆ ಕಾರ್ ಡ್ರಾ ಕೂಪನ್ ನ ಚೀಟಿ ಎತ್ತುವ ಮೂಲಕ ಕಾರು ಗೆದ್ದ ಅದೃಷ್ಟಶಾಲಿಯ ಸಂಖ್ಯೆಯನ್ನು ಘೋಷಿಸಿದರು. ಅಂತೆಯೇ ಇನ್ ವಾಯ್ಸ್ ಸಂಖ್ಯೆ 4265ರ ಕೂಪನ್ ಸಂಖ್ಯೆ 00172ರ, ಶಿರ್ಲಾಲಿನ ಪ್ರಿಯಾಂಕ ಸೆಲೆರಿಯೋ ಕಾರು ಗೆದ್ದ ಅದೃಷ್ಟಶಾಲಿಯಾಗಿದ್ದಾರೆ.
Comments are closed.